ಮೂಡುಬಿದಿರೆ: ಗ್ಯಾಂಗ್ ರೇಪ್ ನಿಂದ ಇಬ್ಬರು ಯುವತಿಯರನ್ನು ರಕ್ಷಿಸಿದ ಮೂಡುಬಿದಿರೆ ಪೊಲೀಸರು
Tuesday, October 14, 2025
ಮೂಡುಬಿದಿರೆ: ನಿಡ್ಡೋಡಿಯ ಮನೆಯೊಂದರಲ್ಲಿ ನಾಲ್ಕು ಮಂದಿ ಯುವಕರೊಂದಿಗೆ ಇಬ್ಬರು ಅಪ್ರಾಪ್ತ ಬಾಲಕಿಯರಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಅವರ ತಂಡವು ದಾಳಿ ನಡೆಸಿ ಸಂಭಾವ್ಯ ಗ್ಯಾಂಗ್ ರೇಪ್ ನಿಂದ ಬಾಲಕಿಯರನ್ನು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.
ಈ ಪ್ರಕರಣದ ಆರೋಪಿಗಳಾಗಿರುವ ನಿಡ್ಡೋಡಿಯ ಮಹೇಶ, ಕಟೀಲು ಪರಿಸರದ ಯಜ್ಞೇಶ್,ದಿಲೀಪ್ ಹಾಗೂ ಶ್ರೀಕಾಂತ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹೇಶ ಎಂಬವನಿಗೆ ಸೇರಿದ ಮನೆಯಾಗಿದ್ದು ಅಲ್ಲಿ ಅವನೊಬ್ಬನೇ ವಾಸವಿದ್ದು ಆ ಮನೆಯನ್ನು ಈ ಕೃತ್ಯಕ್ಕೆ ಉಪಯೋಹಿಸುತ್ತಿದ್ದನೆನ್ನಲಾಗಿದೆ.
ಸಂತ್ರಸ್ತ ಬಾಲಕಿಯರನ್ನು ಮತ್ತು ಆರೋಪಿಗಳನ್ನು ಠಾಣೆಗೆ ತಂದು ವಿಚಾರಿಸಿದಾಗ ಎಲ್ಲ ವಿಚಾರಗಳನ್ನೂ ಬಾಯಿಬಿಟ್ಟಿದ್ದಾರೆ.
ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ಕು ಮಂದಿ ಯುವಕರು ಗ್ಯಾಂಗ್ ರೇಪ್ ನ ಸಿದ್ಧತೆಯಲ್ಲಿದ್ದರೆನ್ನುವುದು ಪೊಲೀಸರಿಗೆ ಗೊತ್ತಾಗಿದೆ. ಅಲ್ಲದೆ ಲೈಂಗಿಕ ಕ್ರಿಯೆಗೆ ಬಳಸುವ ಕೆಲವೊಂದು ವಸ್ತುಗಳೂ ಅಲ್ಲಿ ಪತ್ತೆಯಾಗಿದೆ.
ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಮತ್ತು ಸಿಬಂದಿಗಳ ಸಮಯಪ್ರಜ್ಞೆಯಿಂದಾಗಿ ಗ್ಯಾಂಗ್ ರೇಪ್ ತಪ್ಪಿದೆ. ಆರೋಪಿಗಳನ್ನು ಬಂಧಿಸಿರುವ ಕ್ರಮಕ್ಕೆ ಸಾವ೯ಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ