ಮೂಡುಬಿದಿರೆ: ಶತಾಬ್ದಿ ತುಂಬಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೂಡುಬಿದಿರೆ ತಾಲೂಕು ವತಿಯಿಂದ ವಿಜಯ ದಶಮಿ ಪಥ ಸಂಚಲನ ಭಾನುವಾರ ಬೆಳಗ್ಗೆ ನಡೆಯಿತು.
ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಿಂದ ಹೊರಟ ಗಣವೇಷಧಾರಿಗಳು ಮೂಡುಬಿದಿರೆ ಪೇಟೆಯ ಮೂಲಕ ಸಾಗಿ ಸ್ವರಾಜ್ಯ ಮೈದಾನದವರೆಗೆ ಪಥಸಂಚಲನ ನಡೆಸಿದರು.