ನೆಲ್ಲಿಕಾರು ಗ್ರಾ.ಪಂ.ನ ಪಿಡಿಒ, ಕಾಯ೯ದಶಿ೯ಗೆ ಬೀಳ್ಕೊಡುಗೆ

ನೆಲ್ಲಿಕಾರು ಗ್ರಾ.ಪಂ.ನ ಪಿಡಿಒ, ಕಾಯ೯ದಶಿ೯ಗೆ ಬೀಳ್ಕೊಡುಗೆ


ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್ ನಲ್ಲಿ ಕಳೆದ 7 ವರ್ಷಗಳಿಂದ ಪ್ರಭಾರ  ಪಿಡಿಒ ಆಗಿ ಕಾರ್ಯನಿರ್ವಹಿಸಿ ಇದೀಗ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ವ್ಯಾಪ್ತಿಯ   ಗ್ರಾಮ ಪಂಚಾಯತ್ ಗೆ ವರ್ಗಾವಣೆ ಗೊಂಡಿರುವ ಪ್ರಶಾಂತ್ ಶೆಟ್ಟಿ ಅವರಿಗೆ  ಮತ್ತು 5 ವರ್ಷಗಳಿಂದ ಕಾರ್ಯದರ್ಶಿ ಯಾಗಿದ್ದ ಸುನಂದ ಬಿ. ಜೈನ್ ಅವರಿಗೆ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಶನಿವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ  ವಹಿಸಿ ಮಾತನಾಡಿದ ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ ಅವರು ಇಬ್ಬರು ಅಧಿಕಾರಿಗಳ ಕಾರ್ಯವೈಖರಿ, ಗ್ರಾಮೀಣ ಜನರೊಂದಿಗೆ ಇದ್ದ ಬಾಂಧವ್ಯದ ಬಗ್ಗೆ ಕೊಂಡಾಡಿದರು.  


ಉಪಾಧ್ಯಕ್ಷೆ ಸುಶೀಲ, ಸದಸ್ಯರಾದ ಶಶಿಧರ ಎಂ., ಜಯಂತ ಹೆಗ್ಡೆ  ಅವರು ಮಾತನಾಡಿ  ಪಂಚಾಯತ್ ನ್ನು ಅಭಿವೃದ್ಧಿಯ ಕಡೆಗೆ ಕೊಂಡು ಹೋಗಿ ಮಾದರಿ ಗ್ರಾಮ ಪಂಚಾಯತ್ ಆಗಿ ಪರಿವರ್ತಿಸಿದವರು ಇಂತಹ ಅಧಿಕಾರಿ ವರ್ಗಾವಣೆ ಆಗುತ್ತಿರುವುದು ಬೇಸರದ ವಿಷಯ ಆದರೂ ಸರ್ಕಾರಿ ಅಧಿಕಾರಿಗಳಿಗೆ ವಗಾ೯ವಣೆ ಅನಿವಾರ್ಯ ಆಗಿರುವುದರಿಂದ ಬೀಳ್ಕೊಡುವಿಕೆ ಮಾಡುವುದು ನಮ್ಮ ಕರ್ತವ್ಯ ಆಗಿದೆ ಎಂದರು.

ನೂತನ ಕಾರ್ಯದರ್ಶಿ ದಾಮೋದರ್, ಗ್ರಾಮಸ್ಥರ ಪರವಾಗಿ ವಿದೇಶ ಪೂಜಾರಿ, ವಿಶ್ವನಾಥ ಮಿಯಾರು, ಕಿರಣ್ ರೈ ಹಾಗೂ ಸಂಜೀವಿನಿ ಘಟಕದ ಎಂ.ಬಿ. ಕೆ ಗೀತಾ, ಅಂಗನವಾಡಿ ಕಾರ್ಯಕರ್ತೆ ಅರುಣಾ  ಅವರು ಅಧಿಕಾರಿಗಳ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು.

ಪಂಚಾಯತ್ ಸಿಬ್ಬಂದಿ ಲಕ್ಷ್ಮಣ ಮಾತನಾಡಿದರು. ನಾಗರಿಕರಿಂದ ವಿಶೇಷ ಸನ್ಮಾನ ನೀಡಲಾಯಿತು.

ನೂತನ ಪಿಡಿಒ ರಾಜು ಮುಂದಿನ ದಿನಗಳಲ್ಲಿ ಸರ್ವರ ಸಹಕಾರ ಕೋರಿದರು. ಸದಸ್ಯರಾದ ಲಲಿತಾ,  ಮೋಹಿನಿ, ಸಾಧು, ಪ್ರತಿಮಾ,ಆಶಾಲತಾ ಸುನಂದ ಅಣ್ಣಿ ಪೂಜಾರಿ,ಚಾರ್ಲೆಸ್ ಸಾಂತ್ಮಾಯೂರ್, ಗ್ರಾಮ ಆಡಳಿತಾಧಿಕಾರಿ ಅನಿಲ್ ಉಪಸ್ಥಿತರಿದ್ದರು.

ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article