ನ.1 ಮತ್ತು 2 ರಂದು ‘ಕರಿಯರ್-2025’ ಉದ್ಯೋಗ ಮೇಳ
ಮಂಗಳೂರು: ಐಸಿವೈಎಂ ಸೆಂಟ್ರಲ್ ಕೌನ್ಸಿಲ್-ಮಂಗಳೂರು ಧರ್ಮಪ್ರಾಂತ್ಯ, ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಯೂತ್ ಕಮೀಷನ್ ಡಯಾಸಿಸ್ ಅಫ್ ಮಂಗಳೂರು ಮತ್ತು ಕರ್ನಾಟಕ ಪ್ರಾದೇಶಿಕ ಯುವ ಆಯೋಗದ ಸಹಯೋಗದಲ್ಲಿ ನ.1 ಮತ್ತು 2 ರಂದು ‘ಕರಿಯರ್-2025’ ಉದ್ಯೋಗ ಮೇಳ ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಐಸಿವೈಎಂ ನಿರ್ದೇಶಕ ರೆ. ಫಾ. ಅಶ್ವಿನ್ ಕಾರ್ಡೋಜ ಮಾಹಿತಿ ನೀಡಿ, ಉದ್ಯೋಗ ಮೇಳಕ್ಕೆ ಈಗಾಗಲೇ ನೋಂದಣಿ ಆರಂಭಗೊಂಡಿದ್ದು 1000ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ, ಸ್ಥಳದಲ್ಲೇ ನೋಂದಣಿಗೆ ಅವಕಾಶ ಮಾಡಿಕೊಡಲಾಗುವುದು. ಸುಮಾರು 250ಕ್ಕೂ ಅಧಿಕ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ೫೦೦೦ ಮಂದಿ ಆಗಮಿಸುವ ಸಾಧ್ಯತೆ ಇದೆ. ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದು ತಿಳಿಸಿದರು.
ಮಂಗಳೂರು ಬಿಷಪ್ ಅ. ವಂ. ಡಾ. ಪೀಟರ್ ಪೌವ್ ಸಲ್ಡಾನ್ಹ, ಬಳ್ಳಾರಿ ಬಿಷಪ್ ಅ. ವಂ. ಡಾ. ಹೆನ್ರಿ ಡಿ‘ಸೋಜಾ ಅವರ ಮಾರ್ಗದರ್ಶನದಲ್ಲಿ ವಂ. ಫಾ. ಅಶ್ವಿನ್ ಕಾರ್ಡೋಜ, ಕರ್ನಾಟಕ ಪ್ರಾದೇಶಿಕ ಯುವ ಆಯೋಗದ ಸಂಯೋಜಕ ವಿಲಿನಾ ಗೋನ್ಸಾಲ್ವಿಸ್, ಎಸ್.ಜೆ.ಇ.ಸಿ. ನಿರ್ದೇಶಕ ವಂ. ವಿಲ್ಫ್ರೆಡ್ ಪ್ರಕಾಶ್, ಐಸಿವೈಎಂ ಮಂಗಳೂರು ಅಧ್ಯಕ್ಷ ವಿಜೋಯ್ ಅಶ್ವಿನ್ ಕಾರ್ಡೋಜ, ಯುವ ಸಂಯೋಜಕ ಜೈಸನ್ ಕ್ರಾಸ್ತಾ ಮತ್ತು ತಂಡದವರು ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.
ವಿಲೀನ ಗೋನ್ಸಾಲ್ವಿಸ್, ವಿಜೋಯ್ ಕಾರ್ಡೋಜ, ಜಸ್ಸಿಕ ಸಾಂತ್ ಮಯೋರ್, ಆಶ್ಲೇ ಡಿ‘ಸೋಜ, ಮರಿಯ ಡಿಸಿಲ್ವ, ಬ್ರಿಸ್ಟೋನ್ ರೋಡ್ರಿಗಸ್ ಇದ್ದರು.