ಎನ್.ಎಸ್.ಎಸ್. ಶಿಬಿರದಲ್ಲಿ ಮಾದಕ ವಸ್ತು ಜಾಗೃತಿ ಉಪನ್ಯಾಸ

ಎನ್.ಎಸ್.ಎಸ್. ಶಿಬಿರದಲ್ಲಿ ಮಾದಕ ವಸ್ತು ಜಾಗೃತಿ ಉಪನ್ಯಾಸ


ಮೂಡುಬಿದಿರೆ: ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹವ್ಯಾಸಗಳು ಇದ್ದರೆ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಹೇಳಿದರು.

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮೂಡುಬಿದರೆ ಇದರ ವಾರ್ಷಿಕ ವಿಶೇಷ ಶಿಬಿರದಲ್ಲಿ ಮೂಡು ಮಾರ್ನಾಡು ಸರ್ಕಾರಿ ಶಾಲೆಯಲ್ಲಿ ನಡೆದ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾದಕ ವಸ್ತುಗಳಿಗೆ ಬಲಿಯಾದವರ ವರ್ತನೆ ಬದಲಾಗುತ್ತದೆ, ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಅವರು ಹಣವನ್ನು ಮಾದಕ ವಸ್ತುಗಳ ಮೇಲೆ ವ್ಯಯಿಸುವುದರಿಂದ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಅಂತಹವರು ಸಮಾಜಕ್ಕೆ ಕಂಟಕವಾಗುತ್ತಾರೆ. ತಮ್ಮ ಮೇಲೆ ಹಿಡಿತ ಇಲ್ಲದ ಕಾರಣದಿಂದ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಅಂತಹ ವ್ಯಕ್ತಿಗಳಿಂದ ಹೆತ್ತವರಿಗೂ ತೊಂದರೆ ಆಗುತ್ತದೆ. ಶಿಕ್ಷೆಯ ಜೊತೆಗೆ ಮನಹಾನಿಯೂ ಉಂಟಾಗುತ್ತದೆ. 

ಮಾದಕ ವಸ್ತುಗಳ ಬಗ್ಗೆ ಜ್ಞಾನ ಇರಬೇಕು, ಆದರೆ ಅದಕ್ಕೆ ಬಲಿಯಾಗಬಾರದು. ಗಾಂಜಾ ಸೊಪ್ಪುಗಳನ್ನು ಬೆಳೆಸಲು ಕಾನೂನಿನಲ್ಲಿ ಯಾವುದೇ ಅನುಮತಿ ಇಲ್ಲ.ಗಾಂಜಾ ಹೊರತುಪಡಿಸಿ ಇನ್ನಿತರ ಸಿಂಥೆಟಿಕ್ ಮಾದಕ ದ್ರವ್ಯಗಳೂ ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಮೊದಲು ಆರಂಭವಾಗುವ ದುಶ್ಚಟ ಸಿಗರೇಟು. ಅದು ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ. ಮೊದಲಿಗೆ ಒಂದು ಸಿಗರೇಟು ಬೇಕಾದರೆ, ನಂತರ ಅದೇ ಅನುಭವ ಪಡೆಯಲು ಹಲವಾರು ಬೇಕಾಗುತ್ತದೆ. ಕೆಲವರಿಗೆ ಅದು ದಿನನಿತ್ಯದ ಕೆಲಸ ಮಾಡಲು ಸಹ ಅವಶ್ಯಕವಾಗುತ್ತದೆ ಆದ್ದರಿಂದ ಮಾದಕ ವ್ಯಸನಗಳಿಗೆ ಬಲಿಯಾಗದಿರಿ ಎಂದು ಸಲಹೆ ನೀಡಿದರು.

ಪಡುಮಾರ್ನಾಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯಿಷ್ ಚೌಟ, ಶಾಲೆಯ ಎಸ್ ಡಿಎಂಸಿ ಸದಸ್ಯೆ ಆಶಾ, ಶಿಬಿರಾಧಿಕಾರಿ ತೇಜಸ್ವಿ ಭಟ್, ಸಹ ಶಿಬಿರಾಧಿಕಾರಿಗಳಾದ,  ಪ್ರಶಾಂತ್ ಶೆಟ್ಟಿ ,ಸಂಧ್ಯಾ ಪ್ರದೀಪ್ ,ಅಶೋಕ್ ,ಡಾ ವಾದಿರಾಜ, ವಿಕ್ರಮ್, ದಿವ್ಯಲಕ್ಷ್ಮೀ ರೈ, ಪ್ರಿಯಾಂಕ ಉಪಸ್ಥಿತರಿದ್ದರು. 

ದೀಪ ಸ್ವಾಗತಿಸಿದರು. ಹಿಮಾನಿ ಕಾರ್ಯಕ್ರಮ ನಿರೂಪಿಸಿದರು. ಕುಲ್ಪ್ರೀತ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article