ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ (ರಿ) ಸುಮ್ಮಬಂಡಸಾಲೆ ಬಜಗೋಳಿ ಇಲ್ಲಿಗೆ ಲಯನ್ಸ್  ವತಿಯಿಂದ ಔಷಧದ ಕೊಡುಗೆ ಹಸ್ತಾಂತರ

ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ (ರಿ) ಸುಮ್ಮಬಂಡಸಾಲೆ ಬಜಗೋಳಿ ಇಲ್ಲಿಗೆ ಲಯನ್ಸ್ ವತಿಯಿಂದ ಔಷಧದ ಕೊಡುಗೆ ಹಸ್ತಾಂತರ


ಮೂಡುಬಿದಿರೆ: ರಸ್ತೆ ಅಪಘಾತಗಳಲ್ಲಿ ಗಾಯಗೊಂಡು ಅನಾ ರೋಗ್ಯದಿಂದ ಬಳಲುತ್ತಿರುವ ಬೀದಿ ನಾಯಿಗಳು ಹಾಗೂ ದನಗಳ ರಕ್ಷಣೆಗೆ ಮುಂದಾಗಿರುವ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್  ಆಶ್ರಯದಲ್ಲಿ ಸುಮಾರು 175 ನಾಯಿಗಳು 150 ದನಗಳನ್ನು, ಹಾಗೂ ಬೆಕ್ಕುಗಳನ್ನು ಯಾವುದೇ ಪಲಾಪೇಕ್ಷೆ ಇಲ್ಲದೆ ಸಾಕಲಾಗುತ್ತಿದ್ದು, ಅವರಿಗೆ ನೆರವಾಗುವಂತೆ  ಮೂಡುಬಿದಿರೆ ಲಯನ್ ಸದಸ್ಯರಾದ ಅರವಿಂದ ಪ್ರಭು ಅವರ ವತಿಯಿಂದ ರೂ. 10,000  ಮೌಲ್ಯದ ಔಷಧಿ ಹಾಗೂ 30 ಕೆ. ಜಿ ಅಕ್ಕಿಯನ್ನು ನೀಡಿ ಸಹಕರಿಸಿದ್ದಾರೆ.


ಈ ಸಂದರ್ಭದಲ್ಲಿ ಮೂಡುಬಿದಿರೆ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಓಸ್ವಾಲ್ಡ್  ಡಿಕೋಸ್ತ ಅವರು ಭಾಗವಹಿಸಿದ್ದರು. 

ಈ ಸಂಸ್ಥೆಯು ಆಸುಪಾಸಿನ ಗ್ರಾಮಗಳಲ್ಲಿರುವ ಹೆಣ್ಣು ಬೀದಿ ನಾಯಿಗಳಿಗೆ ಉಚಿತವಾಗಿ ಸಂತಾನ ಹರಣ ಚಿಕಿತ್ಸೆಯನ್ನು ನಡೆಸಿ ಬೀದಿ ನಾಯಿಗಳ ನಿಯಂತ್ರಣದಲ್ಲಿ ಸಹಕರಿಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article