ಪ್ರತಿಭೆಗಳು ಅನಾವಣಗೊಳ್ಳಲು ಸ್ಪಧೆ೯ಗಳು ಸಹಕಾರಿ: ಕೆ. ಅಭಯಚಂದ್ರ ಜೈನ್
ಅವರು ದೀಪಾವಳಿ ಹಬ್ಬದ ಪ್ರಯುಕ್ತ ಸಮಾಜ ಮಂದಿರ ಸಭಾ(ರಿ) ಮತ್ತು ಯುವವಾಹಿನಿ ಮೂಡುಬಿದಿರೆ ಘಟಕ ಜಂಟಿಯಾಗಿ ಸಾರ್ವಜನಿಕರಿಗಾಗಿ ಸಮಾಜ ಮಂದಿರದಲ್ಲಿ ಶನಿವಾರ ಸಂಜೆ ಏಪ೯ಡಿಸಿದ್ದ 4ನೇ ವರ್ಷದ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಡಾ.ಎಂ ಮೋಹನ ಆಳ್ವ ಅವರು ತಮ್ಮ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.
ಪಶುವೈದ್ಯಕೀಯ ಇಲಾಖೆಯ ಸಿಬ್ಬಂದಿ, ಯುವವಾಹಿನಿಯ ಸಲಹೆಗಾರ್ತಿ ವಿನುತಾ ಆನಂದ್ ಗಾಂಧಿನಗರ ಹಾಗೂ 25 ಬಾರಿ ರಕ್ತದಾನ ಮಾಡಿದ ಯುವವಾಹಿನಿಯ ಉಪಾಧ್ಯಕ್ಷ ಗಿರೀಶ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ವಿವೇಕ್ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಪ್ರತಿಭೆಯ ಮೂಲಕ ಇಲ್ಲಿ ಗೂಡುದೀಪ, ರಂಗೋಲಿಯನ್ನು ರಚಿಸಿದ್ದಾರೆ. ಎಲ್ಲರು ಬಹುಮಾನವನ್ನು ಗೆಲ್ಲಲು ಸಾಧ್ಯವಿಲ್ಲದಿದ್ದರೂ ತಮ್ಮ ಪ್ರತಿಭೆ ಮೂಲಕ ಮನಸ್ಸನ್ನು ಗೆದ್ದಿದ್ದಾರೆ. ಇಂತಹ ಪ್ರಯತ್ನಗಳು ಯುವವಾಹಿನಿ ಘಟಕದ ಮುಖಾಂತರ ಸದಾ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯವಾಗ್ಮಿ ಅಜಿತ್ ಕುಮಾರ್ ಪಾಲೇರಿ ದೀಪಾವಳಿಯ ಸಂದೇಶ ನೀಡಿದರು.
ಉದ್ಯಮಿಗಳಾದ ಅಬುಲ್ ಅಲಾ ಪುತ್ತಿಗೆ, ಜಾವೇದ್ ಶೇಖ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು, ಯುವವಾಹಿನಿ ಸಲಹೆಗಾರ ಕುಮಾರ್ ಪೂಜಾರಿ ಇರುವೈಲು, ಪುರಸಭೆ ಸದಸ್ಯರಾದ ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್. ಯುವವಾಹಿನಿ ಕಾರ್ಯದರ್ಶಿ ವಿನೀತ್ ಮತ್ತಿತರರಿದ್ದರು.
ಜಗದೀಶ್ಚಂದ್ರ ಡಿ.ಕೆ ಪ್ರಾಸ್ತವನೆಗೈದು ಸ್ವಾಗತಿಸಿದರು.ನವಾನಂದ ಬಹುಮಾನ ವಿಜೇತರ ವಿವರ ನೀಡಿದರು. ಶಂಕರ್ ಕೋಟ್ಯಾನ್ ಹಾಗೂ ಸುಧಾಕರ್ ಅಳಿಯೂರ್ ಕಾಯ೯ಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಮೇಘನಾ ವಂದಿಸಿದರು.
ಸ್ಪಧಾ೯ ಫಲಿತಾಂಶ: ಫಲಿತಾಂಶ:
ಗೂಡುದೀಪ: ಸಾಂಪ್ರದಾಯಿಕ ವಿಭಾಗ: ರಕ್ಷಿತ್ ಕುಮಾರ್ (ಪ್ರಥಮ), ಸುರೇಂದ್ರ ಅಮೀನ್ (ದ್ವಿತೀಯ) ಹಾಗೂ ಭೋಜ ಅಚ್ಚರಕಟ್ಟೆ (ತೃತೀಯ)
ಆಧುನಿಕ ವಿಭಾಗ: ವಿಠಲ್ ಭಟ್ ಮಂಗಳೂರು (ಪ್ರಥಮ), ವೈಶಲ್ ಅಂಚನ್ ಸುಂಕದಕಟ್ಟೆ (ದ್ವಿತೀಯ) ಹಾಗೂ ಜನಾರ್ಧನ ನಿಡ್ಡೋಡಿ(ತೃತೀಯ)
ಮಾದರಿ ವಿಭಾಗ: ರೋಹಿತ್ ನಾಯ್ಕ್ ಸಂಪಿಗೆ (ಪ್ರಥಮ), ರಂಜಿತ್ (ದ್ವಿತೀಯ) ಹಾಗೂ ಯತೀಶ್ ಆಚಾರ್ಯ (ತೃತೀಯ)
ರಂಗೋಲಿ ಸ್ಪಧೆ: ಶ್ರೇಯಾ (ಪ್ರಥಮ), ಶ್ರವಣ್ಯಾ ಎಸ್. ಆಚಾರ್ಯ (ದ್ವಿತೀಯ) ಹಾಗೂ ಸಾನ್ವಿ (ತೃತೀಯ)
ಸಮಾಧನಕಾರ ಬಹುಮಾನ: ಅನುಷಾ, ಪ್ರೇರಣಾ, ಸಹನ್ಯಾ ಕೋಟ್ಯಾನ್ ಅವರು ಪಡೆದುಕೊಂಡರು.
