ಸ್ಪೂತಿ೯ ವಿಶೇಷ ಶಾಲೆಯಲ್ಲಿ ಶೌಚಾಲಯ ಉದ್ಘಾಟನೆ, ಶಾಲಾ ವಾಹನ ಲೋಕಾಪ೯ಣೆ

ಸ್ಪೂತಿ೯ ವಿಶೇಷ ಶಾಲೆಯಲ್ಲಿ ಶೌಚಾಲಯ ಉದ್ಘಾಟನೆ, ಶಾಲಾ ವಾಹನ ಲೋಕಾಪ೯ಣೆ


ಮೂಡುಬಿದಿರೆ: ಬೆಳುವಾಯಿಯ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯ ಆವರಣದಲ್ಲಿರುವ  ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಲಾದ ವಿಕಲಚೇತನ ಸ್ನೇಹಿ ಶೌಚಾಲಯದ ಉದ್ಘಾಟನೆ ಮತ್ತು ಹೊಸ ಶಾಲಾ ವಾಹನದ ಲೋಕಾರ್ಪಣಾ ಕಾರ್ಯಕ್ರಮ ಶನಿವಾರ ನಡೆಯಿತು.

ಮೂಡುಬಿದಿರೆಯ ರೋಟರಿ ಕ್ಲಬ್ ಅಧ್ಯಕ್ಷ  ನಾಗರಾಜ್ ಹೆಗ್ಡೆ ಅವರು ನೂತನ ಶೌಚಾಲಯವನ್ನು ಉದ್ಘಾಟಿಸಿದರು. 'ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು'  ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಅವರು ಹೊಸ ಶಾಲಾ ವಾಹನವನ್ನು ಲೋಕಾರ್ಪಣೆ ಮಾಡಿದರು. ಈ ಎರಡೂ ಸೌಲಭ್ಯಗಳು ವಿಶೇಷ ಚೇತನ ಮಕ್ಕಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಹೆಜ್ಜೆಯಾಗಿವೆ.


ರೋಟರಿ ಚಾರಿಟೇಬಲ್ ಟ್ರಸ್ಟ್  ಮೂಡುಬಿದಿರೆ ಅಧ್ಯಕ್ಷ ಪಿ. ಕೆ. ಥೋಮಸ್, ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ ಇದರ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ, ಬೆಳುವಾಯಿ ಪಂಚಾಯತ್ ಸದಸ್ಯ ಪ್ರವೀಣ್ ಮಸ್ಕರೇನಸ್, ಮೂಡುಬಿದಿರೆಯ ಉದ್ಯಮಿಗಳಾದ  ಅಬುಲಾಲ್ ಪುತ್ತಿಗೆ,  ಸಿ. ಹೆಚ್. ಅಬ್ದುಲ್ ಗಫೂರ್,ಬೆಳುವಾಯಿ ವಿದ್ಯಾವರ್ಧಕ ಸಂಘ ಟ್ರಸ್ಟಿ ಯುವರಾಜ್ ಜೈನ್ ಕಲ್ಲೋಳಿ, ಪೋಷಕರ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್, ರೋಟರಿ ಕ್ಲಬ್ ಮೂಡುಬಿದಿರೆ  ಪದಾಧಿಕಾರಿಗಳು, ಸದಸ್ಯರು ಮತ್ತು ದಾನಿಗಳು ಉಪಸ್ಥಿತರಿದ್ದರು.

ಶಾಲೆಯ ಸಂಸ್ಥಾಪಕ‌ ಪ್ರಕಾಶ್ ಜೆ.ಶೆಟ್ಟಿಗಾರ್  ಪ್ರಸ್ತಾವನೆಗೈದು ಸ್ವಾಗತಿಸಿದರು. ಶಿಕ್ಷಕಿ ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರಮ್ಯಾ ಯೋಜನೆಗೆ ಸಹಕಾರ ನೀಡಿದ ದಾನಿಗಳ ವಿವರವನ್ನು ವಾಚಿಸಿದರು.  ಯೋಜನೆಗೆ ಕೈಜೋಡಿಸಿದ  ದಾನಿಗಳನ್ನು ಗೌರವಿಸಲಾಯಿತು. ಅನಿತಾ ರೋಡ್ರಿಗಸ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article