ಕೌಟುಂಬಿಕ ಸಮಸ್ಯೆ: ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ
Thursday, October 30, 2025
ಮೂಡುಬಿದಿರೆ: ಕೌಟುಂಬಿಕ ಸಮಸ್ಯೆಯಿಂದಾಗಿ ಆಟೋ ಚಾಲಕನೋವ೯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಒಂಟಿಕಟ್ಟೆಯಲ್ಲಿ ನಡೆದಿದೆ.
ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆ ನಿವಾಸಿ, ಆಟೋ ಚಾಲಕ ರಾಜೇಶ್ (42) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.
ಅವರು ಮಹಾವೀರ ಕಾಲೇಜು ಬಳಿಯ ಆಟೋ ಪಾರ್ಕ್ನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ರಾಜೇಶ್ ಅವರು ತಮ್ಮ ಸ್ನೇಹಪರ ಸ್ವಭಾವವನ್ನು ಹೊಂದಿದ್ದರು.
ಕೌಟುಂಬಿಕ ಸಮಸ್ಯೆಯಿಂದಾಗಿ ಮೊದಲಿಗೆ ವಿಷ ಸೇವಿಸಿ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ರಾಜೇಶ್ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.