ಅಧಿಕಾರಿಗಳ ಸಭೆ-ಕಾಮಗಾರಿ ವೀಕ್ಷಣೆಗೆ ಸಮಿತಿ ರಚನೆ

ಅಧಿಕಾರಿಗಳ ಸಭೆ-ಕಾಮಗಾರಿ ವೀಕ್ಷಣೆಗೆ ಸಮಿತಿ ರಚನೆ


ಸುಳ್ಯ: ಸುಳ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಸುಳ್ಯದ ಅಂಬೇಡ್ಕರ್ ಭವನವನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ವೀಕ್ಷಣೆ ಮಾಡಿದರು. ಬಳಿಕ ತಾಲೂಕು ಪಂಚಾಯತ್ ಸಭಾಂಗಣದಲ್ಲಿ  ಅಧಿಕಾರಿಗಳ ಸಭೆ ನಡೆಸಿದ ಶಾಸಕರು ಈಗಾಗಲೇ ಒಟ್ಟು 5 ಕೋಟಿ ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು ಅದರಂತೆ ಎರಡು ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಇನ್ನುಳಿದ ಅಭಿವೃದ್ಧಿಗೆ ಅನುದಾನ  ಕೋರಿಕೊಂಡ ಮೇರೆಗೆ  3 ಕೋಟಿ ಅನುದಾನ ಬಿಡುಗಡೆಯಾಗಿದೆ. 

ಕಾಮಗಾರಿ ತ್ವರಿತವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ನೀಲಿನಕ್ಷೆ ಮತ್ತು ಅಂದಾಜು ಪಟ್ಟಿ ತಯಾರಿಸಿ ಕೂಡಲೇ ನೀಡಬೇಕು ಹಾಗೂ ಮುಂದಿನ ತಿಂಗಳಿನಲ್ಲೆ ಟೆಂಡರ್ ಹಂತಕ್ಕೆ ಬಂದು ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭವಾಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ಬಾರಿಯ ಅಂಬೆಡ್ಕರ್ ಜಯಂತಿ ಕಾರ್ಯಕ್ರಮವು ನೂತನವಾಗಿ ನಿರ್ಮಾಣವಾದ ಭವನದಲ್ಲಿ ಆಗಬೇಕು ಎಂದು ಹೇಳಿದರು. 

ಪರಿಶೀಲನೆ ಸಮಿತಿ ರಚನೆ..

ಶಾಸಕಿ ಮಾತನಾಡಿ ಅಂಬೆಡ್ಕರ್ ಭವನದ ಕುರಿತಾಗಿ ಪ್ರತಿಯೊಬ್ಬರು ಪ್ರಶ್ನೆಯನ್ನು ಎತ್ತುದಿದ್ದು ಅಲ್ಲದೇ ಮುಂದೇ ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಲು ಸಾರ್ವಜನಿಕರು ಮತ್ತು ನಾಯಕರನ್ನು ಸೇರಿಸಿಕೊಂಡು ಸಮಿತಿ ರಚಿಸುವ ಕುರಿತಾಗಿ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಮಾಜಿ ಜಿ.ಪಂ. ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಮಾಜಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋಪಾಲ. ಕೆ, ಸಹಾಯಕ ಅಭಿಯಂತರ ಪರಮೇಶ್ವರ. ಪಿ, ಜಿಲ್ಲಾ ಪಂಚಾಯತ್ ವಿಭಾಗದ ಎಇಇ ಫಯಾಝ್ ಅಹಮ್ಮದ್, ಇಂಜಿನಿಯರ್ ಮಣಿಕಂಠ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್, ಗುತ್ತಿಗೆದಾರ ಯೋಗೀಶ್ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ ನಂದಿನಿ , ಸ್ಮಿತಾ, ಪ್ರಮುಖರಾದ ಸುಭೋದ್ ಶೆಟ್ಟಿ ಮೇನಾಲ, ಬಾಲಕೃಷ್ಣ ಕೀಲಾಡಿ, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article