ಇರುವೈಲಿನಲ್ಲಿ ದೊಂದಿ ಬೆಳಕಿನಲ್ಲಿ ಮಂತ್ರದೇವತೆ ದೈವದ ಕೋಲ
Wednesday, October 8, 2025
ಮೂಡುಬಿದಿರೆ: ತಾಲೂಕಿನ ಇರುವೈಲು ಗ್ರಾಮದ ಕಿಟ್ಟುಬೆಟ್ಟುವಿನ ಶೋಭಾ ಸೋಮಶೇಖರ್ ಅವರ ಮನೆಯಲ್ಲಿ ದೈವರಾಧಕರಾದ ಮುಂಬಾಯಿಯ ಮಹಾಬಲ ಸಾಲ್ಯಾನ್ ಅವರ ಸಲುವಾಗಿ ಮಂತ್ರದೇವತೆ ದೈವದ ಹರಕೆಯ ಕೋಲವು ದೊಂದಿ ಬೆಳಕಿನಲ್ಲಿ ನಡೆಯಿತು.
ಹಿಂದೆ ತುಳುನಾಡಿನ ಕಾರಣಿಕದ ದೈವಗಳಿಗೆ ನಡೆಯುವ ಕೋಲ ಅಥವಾ ನೇಮೋತ್ಸವ ದೊಂದಿ ಬೆಳಕಿನಲ್ಲಿ ನಡೆಯುತ್ತ ಬರುತ್ತಿತ್ತು ನಂತರ ಕಾಲ ಬದಲಾಗುತ್ತಾ ಬಂದಂತೆ ತಾಂತ್ರಿಕತೆಗಳು ಕೂಡಾ ಬದಲಾಗಿದೆ ಅದರಂತೆ ಇಂದು ನಡೆಯುವ ದೈವದ ಕೋಲಗಳು ವಿದ್ಯುತ್ ದೀಪದ ಬೆಳಕು ಮತ್ತು ಅಲಂಕಾರಗಳ ಮಧ್ಯೆ ನಡೆಯುತ್ತಿವೆ.
ಆದರೆ ಇರುವೈಲಿನ ಈ ಕುಟುಂಬವು ಹಿಂದಿನ ಕಾಲದ ಸಾಂಪ್ರದಾಯಿಕ ಆಚರಣೆಯಂತೆ ಶ್ರದ್ಧಾ ಭಕ್ತಿಯಿಂದ ಮಂತ್ರದೇವತೆಯ ಕೋಲದ ಸೇವೆಯನ್ನು ದೊಂದಿ ಬೆಳಕಿನಲ್ಲಿ ಮಾಡುವ ಮೂಲಕ ಹಳೆಯ ಸಾಂಪ್ರದಾಯವನ್ನು ಯುವ ಜನತೆಗೆ ಪರಿಚಯಿಸಿ ಗಮನ ಸೆಳೆದಿದೆ.