ಸವಣೂರು ಸೀತಾರಾಮ ರೈ ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ
Tuesday, October 7, 2025
ಸುಳ್ಯ: ಸುಳ್ಯದ ಗಾಂಧಿ ಚಿಂತನ ವೇದಿಕೆ ನೀಡುವ ರಾಜ್ಯ ಮಟ್ಟದ ‘ಗಾಂಧಿ ಸ್ಮೃತಿ ಪ್ರಶಸ್ತಿ’-2025ನ್ನು ಹಿರಿಯ ಸಹಕಾರಿ ಧುರೀಣ, ಶಿಕ್ಷಣ ಸಂಸ್ಥೆಗಳ ಸ್ಥಾಪಕ ಸವಣೂರು ಸೀತಾರಾಮ ರೈ ಅವರಿಗೆ ನೀಡಿ ಗೌರವಿಸಲಾಯಿತು.
ಸೀತಾರಾಮ ರೈ ಅವರ ಸವಣೂರು ಸ್ವಗೃಹದಲ್ಲಿ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಪ್ರಶಸ್ತಿ ಪ್ರದಾನ ಮಾಡಿದರು.
ವೇದಿಕೆಯ ಸ್ಥಾಪಕ ಸಂಚಾಲಕ ಡಾ. ಸುಂದರ ಕೇನಾಜೆ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯ ಸಂಚಾಲಕ ಚಂದ್ರಶೇಖರ ಪೇರಾಲು ಅಭಿನಂದನಾ ಮಾತುಗಳನ್ನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ವಹಿಸಿದ್ದರು. ಸವಣೂರು ಸಹಕಾರಿ ಬ್ಯಾಂಕ್ ಸಿಇಒ ಚಂದ್ರಶೇಖರ್ ಸ್ವಾಗತಿಸಿದರು. ವೇದಿಕೆಯ ಸಂಚಾಲಕ ಶಂಕರ ಪೆರಾಜೆ ವಂದಿಸಿ, ಇನ್ನೋರ್ವ ಸಂಚಾಲಕ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಕೆ.ಆರ್. ಗೋಪಾಲಕೃಷ್ಣ ಆಶಯ ಗೀತೆ ಹಾಡಿದರು. ಸಂಚಾಲಕಿ ಚಂದ್ರವತಿ ಬಡ್ಡಡ್ಕ ಉಪಸ್ಥಿತರಿದ್ದರು.