
ಮಾಂಟ್ರಾಡಿಯಲ್ಲಿ ಟ್ರ್ಯಾಕ್ಟರ್ ಸಹಿತ ಯುವಕ ಬಾವಿಗೆ ಬಿದ್ದು ಸಾವು
Tuesday, October 21, 2025
ಮೂಡುಬಿದಿರೆ: ಪಕ್ಕದ ಮನೆಯವರ ಟ್ರ್ಯಾಕ್ಟರ್ ನ್ನು ರಿವಸ್ ೯ ತೆಗೆಯಲು ಹೋಗಿ ಯುವಕನೊಬ್ಬ ವಾಹನ ಸಹಿತ ಬಾವಿಗೆ ಬಿದ್ದು ಸಾವನ್ನಪ್ಪಿದ ದುಘ೯ಟನೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಕೊಂಬೆಟ್ಟುವಿನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಕೊಂಬೆಟ್ಟು ನಿವಾಸಿ ರಾಜೇಶ್ (38) ಮೃತ ದುರ್ದೈವಿ.
ರಾಜೇಶ್ ಅವರು ತಮ್ಮ ಮನೆಯ ಪಕ್ಕದಲ್ಲಿರುವ ಸಂಬಂಧಿಕರ ವಾಹನವನ್ನು (ಗಾಡಿಯನ್ನು) ಬಾವಿಯ ಸಮೀಪ ತೊಳೆಯುತ್ತಿದ್ದರು. ಈ ಸಂದರ್ಭದಲ್ಲಿ ವಾಹನವು ರೋಲ್ ಆಗಿ ಬಾವಿಯ ಕಡೆಗೆ ಚಲಿಸಲಾರಂಭಿಸಿತು. ವಾಹನವನ್ನು ಹಿಡಿದು ನಿಲ್ಲಿಸಲು ಹೋಗಿ, ಅವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ರಾಜೇಶ್ ಅವರು ಪತ್ನಿ ಮತ್ತು ಇಬ್ಬರು ಪುಟ್ಟ ಪುತ್ರಿಯರನ್ನು ಅಗಲಿದ್ದಾರೆ.
ಈ ಅಕಾಲಿಕ ಸಾವಿಗೆ ಸ್ಥಳೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.