ಶಿರ್ವ ಸಂತ ಮೇರಿ ಕಾಲೇಜು: ‘ಫಿಟ್ ಇಂಡಿಯಾ ಫ್ರೀಡಂ ರನ್ 6.0’
Thursday, October 30, 2025
ಶಿರ್ವ: ಶಿರ್ವ ಸಂತಮೇರಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗ, ಯೋಗ ಮತ್ತು ದೈಹಿಕ ಸದೃಡತೆಯ ಕೋಶ, ಐಐಸಿ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ‘ಫಿಟ್ ಇಂಡಿಯಾ ಫ್ರೀಡಂ ರನ್ 6.0’ ಕಾರ್ಯಕ್ರಮವನ್ನು ಗುರುವಾರ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ದಿನನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರೋಗ್ಯ ಪೂರ್ಣ ಯುವಕರಾಗಿ ಸದೃಡರಾಗಿರಬೇಕೆಂದು ಸಲಹೆ ನೀಡಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಹಾಗೂ ಯೋಗ ಮತ್ತು ಸದೃಡ ಕೋಶದ ಸಂಯೋಜಕಿ ಸಂಧ್ಯಾ ಕೆ. ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಐಐಸಿ ಅಧ್ಯಕ್ಷ ಕೆ. ಪ್ರವೀಣ್ ಕುಮಾರ್, ಐಕ್ಯೂಎಸಿ ಸಂಯೋಜಕ ಜಗದೀಶ್ ಆಚಾರ್ಯ, ಐಐಸಿ ಸಂಯೋಜಕಿ ರಶ್ಮಿ ಆಚಾರ್ಯ, ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ ಹೆಗ್ಟೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸೂರ್ಯ, ಕ್ರಿಸ್ಟನ್ ಸಹಕರಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿನಿ ಶ್ರೀನಿಧಿ ಸ್ವಾಗತಿಸಿ, ತೃಷ ವಂದಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ನಿರೂಪಿಸಿದರು.