ಅಭಿಷೇಕ್ ಸಾವಿಗೆ ಕಾರಣರಾದ ನಾಲ್ಕು ಜನರನ್ನು ಶೀಘ್ರ ಬಂಧಿಸಿ: ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಅಗ್ರಹ
Saturday, October 18, 2025
ಶಿರ್ವ: ಸಮಾಜದಲ್ಲಿ ಹೆಣ್ಣಿಗೆ ಒಂದು ನ್ಯಾಯ, ಗಂಡಿಗೆ ಒಂದು ನ್ಯಾಯ. ಇದು ಯಾವ ಕಾನೂನು. ಇತ್ತೀಚೆಗೆ ಪರಪ್ಪಾಡಿಯಲ್ಲಿ ಮನನೊಂದು ಅಭಿಷೇಕ್ ಸಾವಿಗೆ ಶರಣಾಗಿದ್ದರು.
ಅವರ ಸಾವಿನ ಹಿಂದೆ ನಾಲ್ವರು ಬ್ಲಾಕ್ ಮೇಲರ್ಸ್ ಇದ್ದಾರೆ. ಆದರೆ ಘಟನೆ ನಡೆದು ಇಷ್ಟು ದಿನವಾದರೂ ಯಾಕೆ ಕಾನೂನು ಕ್ರಮ ಆಗುತ್ತಿಲ್ಲ. ಇದೇ ವೇಳೆ ಈ ಘಟನೆ ಹೆಣ್ಣು ಮಗಳಿಗೆ ಆಗುತ್ತಿದ್ದರೆ ಇಷ್ಟರವರಗೆ ಆ ಗಂಡು ಮಗುವಿನ ಮತ್ತು ಅವರ ಕುಟುಂಬದ ಜೀವನವೇ ದಿಕ್ಕಾಪಾಲಾಗುವಂತಾಗುತ್ತಿತ್ತು. ಆದ್ದರಿಂದ ಯಾರೇ ತಪ್ಪು ಮಾಡಿದರು ಸಮಾಜದಲ್ಲಿ ಎಲ್ಲರಿಗೂ ಒಂದೇ ಕಾನೂನುಗಳಿರಬೇಕು. ಆದ್ದರಿಂದ ಆ ಸಾವಿಗೆ ಕಾರಣರಾದ ನಾಲ್ವರನ್ನು ಬಂದಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಮುಂದಿನ ದಿನಗಳಲ್ಲಿ ಸಮಾಜಲ್ಲಿ ಯಾರೂ ಈ ರೀತಿಯ ಘಟನೆಗೆ ಸಿಲುಕಬಾರದು. ಅದಕ್ಕಾಗಿ ಕಠಿಣ ಶಿಕ್ಷೆ ನೀಡಬೇಕಾಗಿ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಒತ್ತಾಯಿಸಿದ್ದಾರೆ.