ಭಾರತೀಯ ಸನಾತನ ಪರಂಪರೆಯಲ್ಲಿ ದೀಪಾವಳಿ ಬಹುದೊಡ್ಡ ಹಬ್ಬ: ಪಿ.ಕೆ. ಸದಾನಂದ

ಭಾರತೀಯ ಸನಾತನ ಪರಂಪರೆಯಲ್ಲಿ ದೀಪಾವಳಿ ಬಹುದೊಡ್ಡ ಹಬ್ಬ: ಪಿ.ಕೆ. ಸದಾನಂದ


ಶಿರ್ವ: ತುಳುನಾಡಿನಲ್ಲಿ ನಮ್ಮ ಜೀವನಕ್ಕೆ ಆಧಾರವಾಗಿರುವ ನೆಲ, ಜಲ, ಧನ, ಧಾನ್ಯ, ಆಯುಧ, ಗೋವು, ಕೃಷಿ ಪೂರಕ ಯಂತ್ರೋಪಕರಣಗಳು ವಾಹನಾಧಿಗಳನ್ನು ಪೂಜಿಸಿ ಧನ್ಯತಾ ಭಾವದಿಂದ ಪೂಜಿಸಿ ಕೃತಜ್ಞತೆಯನ್ನು ಸಲ್ಲಿಸುವ ಭಾರತೀಯ ಸನಾತನ ಪರಂಪರೆಯಲ್ಲಿ ದೀಪಾವಳಿ ಬಹುದೊಡ್ಡ ಹಬ್ಬ ಎಂದು ಜಾನಪದ ಚಿಂತಕ, ಸಮಾಜ ಸೇವಕ ಪಡುಬಿದ್ರೆ ಪಿ.ಕೆ. ಸದಾನಂದ ಹೇಳಿದರು.

ಅವರು ಶುಕ್ರವಾರ ಬಂಟಕಲ್ಲು ರೋಟರಿ ಭವನದಲ್ಲಿ ಜರುಗಿದ ‘ದೀಪಾವಳಿ ಸಂಭ್ರಮ-2025’ ಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ದೀಪಾವಳಿಯ ಹಿನ್ನೆಲೆ, ಆಚರಣಾ ಪದ್ಧತಿ, ಸಂಬಂಧಿಸಿದ ಪುರಾತನ ದಂತಕಥೆಗಳ ಮೂಲಕ ಮಾಹಿತಿ ನೀಡಿ ಹಬ್ಬದ ಶುಭಾಶಯ ಕೋರಿದರು. ಸಾಮೂಹಿಕವಾಗಿ ದೀಪಗಳ ಪ್ರಜ್ವಲನದೊಂದಿಗೆ ಶುಭಾಶಯ ವಿನಿಮಯ ನಡೆಯಿತು. ರಘುಪತಿ ಐತಾಳ್ ನೇತೃತ್ವದಲ್ಲಿ ಸಿಡಿಮದ್ದುಗಳ ಪ್ರದರ್ಶನ ನಡೆಯಿತು.

ಕೃಷಿಮೂಲ, ಋಷಿ ಮೂಲ ಪರಂಪರೆ ಆದಿಯಾಗಿ ಕಾರ್ತಿಕಾ ಮಾಸದಲ್ಲಿ ದೀಪಾರಾಧನೆಯೊಂದಿಗೆ ಆಚರಿಸಲ್ಪಟ್ಟುವ ದೀಪಾವಳಿ ಹಬ್ಬ ಪುರಾತನ ಹಿನ್ನೆಲೆಯ ಆಧಾರ ಇತಿಹಾಸವನ್ನು ಹೊಂದಿದೆ. ದೇಶದಾದ್ಯಂತ ಜಾತಿ, ಮತ ವರ್ಣ ಭೇಧಗಳಿಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಸರ್ವಧರ್ಮೀಯರೂ ತಮ್ಮ ಸ್ಥಳೀಯ ಪರಂಪರೆಯ ಹಿನ್ನೆಲೆಯ ಅಧಾರದಲ್ಲಿ ಹಬ್ಬವನ್ನು ಆಚರಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ಜಾನಪದ ಚಿಂತಕ ಪಿ.ಕೆ. ಸದಾನಂದ, ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಶ್ರೀನಿವಾಸ ನಾಯ್ಕ್ ಕುಂಜಾಲು, ಬಾಲಪ್ರತಿಭೆ, ವೀಣಾವಾದಕಿ ಶ್ರೇಯಾ ಯು. ನಾಯಕ್ ಇವರನ್ನು ರೋಟರಿ ವಲಯ ಸೇನಾನಿ ಸಂದೀಪ್ ಬಂಗೇರ ‘ದೀಪಾವಳಿ ಗೌರವ’ದೊಂದಿಗೆ ಸನ್ಮಾನಿಸಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ವಿಲಿಯಮ್ ಮಾಚಾದೋ ವಹಿಸಿದ್ದರು. ಸಂಘ ಸೇವಾ ನಿರ್ದೇಶಕ ಹೆರಾಲ್ಡ್ ಕುಟಿನ್ಹೊ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಡಾ. ವಿಟ್ಠಲ್ ನಾಯಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ. ಶ್ರೀರಾಮ್ ಪಿ.ಮರಾಠೆ ಪ್ರಾರ್ಥಿಸಿದರು. ದಿನೇಶ್ ಕುಲಾಲ್ ಪರಿಚಯಿಸಿದರು. ಬಿ. ಪುಂಡಲೀಕ ಮರಾಠೆ ನಿರೂಪಿಸಿದರು. ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್ ವಂದಿಸಿದರು. ನಂತರ ಬಾಲ ಪ್ರತಿಭೆ ಶ್ರೇಯಾ ನಾಯಕ್‌ರಿಂದ ವೀಣಾವಾದನ ಕಾರ್ಯಕ್ರಮ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article