ಬೆಳ್ಳಾರೆ-ದರ್ಖಾಸು: ರಸ್ತೆ ಅಭಿವೃದ್ಧಿ ಕಾಮಗಾರಿ ಶಾಸಕರಿಂದ ವೀಕ್ಷಣೆ
ಲೋಕೋಪಯೋಗಿ ಇಂಜಿನಿಯರ್‌ಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೊತೆ ಚರ್ಚಿಸಿ ಕಾಮಗಾರಿಯನ್ನು ಶೀಘ್ರ ಮುಗಿಸಲು ಸೂಚಿಸಿದರು. ಡಿಸೆಂಬರ್ ತಿಂಗಳ ಮೊದಲು ಕಾಮಗಾರಿ ಮುಗಿಸಲು ಶಾಸಕರು ಸೂಚಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಪ್ರಮುಖರಾದ ಬಾಲಕೃಷ್ಣ ಕೀಲಾಡಿ, ಶ್ರೀನಾಥ್ ರೈ ಬಾಳಿಲ, ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಶಾಂತರಾಮ ಕಣಿಲೆಗುಂಡಿ, ಶೇಖರ ಮಡ್ತಿಲ, ಪದ್ಮನಾಭ ಬೀಡು, ನವೀನ್ ಕುಮಾರ್ ರೈ ತಂಬಿನಮಕ್ಕಿ, ಮೋನಪ್ಪ ತಂಬಿನಮಕ್ಕಿ ಪ್ರೇಮಚಂದ್ರ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.
10 ಕೋಟಿ ಅನುದಾನದಲ್ಲಿ ಬೆಳ್ಳಾರೆಯಿಂದ ದರ್ಖಾಸು ತನಕ ರಸ್ತೆ ಅಭಿವೃದ್ಧಿಯಾಗುತ್ತಿದೆ:
ಸುಳ್ಯ-ಪೈಚಾರು-ಬೆಳ್ಳಾರೆ-ದಿಡುಪೆ ರಾಜ್ಯ ಹೆದ್ದಾರಿ 276ರಲ್ಲಿ ಕಿ.8.30ರಿಂದ 11 ಕಿ.ಮಿ. ತನಕ ಅಂದರೆ ಬೆಳ್ಳಾರೆಯಿಂದ ದರ್ಖಾಸ್ತು ತನಕ ರಸ್ತೆ ಅಗಲೀಕರಣ ಮತ್ತು ಡಾಮರೀಕರಣ ಕಾಮಗಾರಿ ನಡೆಯುತಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ರೂ.10 ಕೋಟಿ ವೆಚ್ಚದಲ್ಲಿ ರಸ್ತೆ ಮರು ನಿರ್ಮಾಣ ಆಗಲಿದೆ. ಎಸ್‌ಎಚ್‌ಡಿಪಿ ಯಡಿಯಲ್ಲಿ 10 ಕೋಟಿ ಅನುದಾನ ಮಂಜೂರಾಗಿದ್ದು ಬೆಳ್ಳಾರೆಯಿಂದ ದರ್ಖಾಸ್ ತನಕ ರಸ್ತೆ ಸಂಪೂರ್ಣ ಮರು ನಿರ್ಮಾಣ ಆಗಲಿದೆ. 7 ಮೀಟರ್ ಅಗಲದಲ್ಲಿ ದ್ವಿಪಥ ರಸ್ತೆ ನಿರ್ಮಾಣ ಆಗಲಿದೆ. ಮೋರಿಗಳ ನಿರ್ಮಾಣ, ಆಯ್ದ ಭಾಗದಲ್ಲಿ ಚರಂಡಿ ನಿರ್ಮಾಣ, ರಸ್ತೆ ಸುರಕ್ಷಾ ಕಾಮಗಾರಿಗಳು ನಡೆಯಲಿದೆ.