ಚಪ್ಪಲಿಯೊಳಗಿದ್ದ ವಿಷದ ಹಾವು ಕಡಿತ: ಮಹಿಳೆ ಅಸ್ವಸ್ಥ
Monday, October 27, 2025
ಸುಳ್ಯ: ವಿಷದ ಹಾವು ಕಡಿತದಿಂದ ಮಹಿಳೆಯೋರ್ವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿಗ್ರಾಮದ ಕೋಲ್ಚಾರಿನಲ್ಲಿ ಅ.26 ರಂದು ಸಂಭವಿಸಿದೆ.
ಕೋಲ್ಚಾರಿನ ವಿನುತಾ ಅವರು ಬೆಳಗ್ಗೆ ಮನೆಯ ಹೊರ ಭಾಗದಲ್ಲಿ ಇರಿಸಿದ್ದ ಚಪ್ಪಲಿಯನ್ನು ಧರಿಸಲು ಹೋದಾಗ ಚಪ್ಪಲಿಯ ಒಳಗಡೆ ಸೇರಿಕೊಂಡಿದ್ದ ಹಾವು ಕಾಲಿಗೆ ಕಚ್ಚಿದೆ.
ಕೂಡಲೇ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಮುಂದುವರಿದಿದೆ.