ಭರತನಾಟ್ಯದಲ್ಲಿ ಪೂರ್ವಿಗೆ ಡಿಸ್ಟಿಂಕ್ಷನ್
Monday, October 6, 2025
ಉಜಿರೆ: ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಇತ್ತೀಚಿಗೆ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಬೆಂಗಳೂರು ಶ್ರೀನಿವಾಸ ನಗರದ ಶ್ರೀಮತಿ ಪವಿತ್ರ ಪ್ರಶಾಂತ್ ಅವರ ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಇದರ ವಿದ್ಯಾರ್ಥಿನಿ ಪೂರ್ವಿ ಶೇ.92 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.
ಬೆಂಗಳೂರಿನಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಇವಳು ಉಜಿರೆಯ ಸಂಗೀತ ಶಿಕ್ಷಕಿ ಕೆ.ಆರ್ ಶಾಂತ ಮತ್ತು ರಘುಪತಿ ಭಟ್ ಅವರ ಮೊಮ್ಮಗಳು ಹಾಗೂ ಬೆಂಗಳೂರಿನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿರುವ ವಸಂತ ಕುಮಾರ್ ಮತ್ತು ಚೈತ್ರ ಅವರ ಸುಪುತ್ರಿ.