ಬಾವಿಯಲ್ಲಿ ಯುವಕನ ಮೃತದೇಹ ಪತ್ತೆ
Friday, October 10, 2025
ಉಳ್ಳಾಲ: ಕಿನ್ಯದ ಖಾಸಗಿ ತೋಟದ ಬಾವಿಯೊಂದರಲ್ಲಿ ಯುವಕನೋರ್ವನ ಮೃತ ದೇಹ ಪತ್ತೆಯಾಗಿದ ಘಟನೆ ಕಿನ್ಯದಲ್ಲಿ ನಡೆದಿದೆ.
ಕಿನ್ಯ ಗ್ರಾಮದ ಪಾಲ್ತಾಡಿ ನಿವಾಸಿ ಮಿಥುನ್ ಶೆಟ್ಟಿ (32) ಮೃತ ಯುವಕ.
ಅವರು ಕಾಲು ಜಾರಿ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಅವಿವಾಹಿತನಾಗಿರುವ ಅವರು, ಮಂಗಳೂರಿನ ಬೇಕರಿ ಒಂದರಲ್ಲಿ ಉದ್ಯೋಗದಲ್ಲಿದ್ದರು.ಅವರು ಗುರುವಾರ ಬೆಳಗ್ಗಿನಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಯುವಕರು ಹುಡುಕಾಡಿದ್ದು ಗುರುವಾರ ಮಧ್ಯಾಹ್ನದ ವೇಳೆ ಮಿಥುನ್ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಯುಡಿಆರ್ ಪ್ರಕರಣ ದಾಖಲಿಸಿದ್ದಾರೆ.