ಹಾಡಹಗಲೇ ಅಂಗಡಿಯಲ್ಲಿ ಲಕ್ಷಾಂತರ ರೂ. ಕಳವು

ಹಾಡಹಗಲೇ ಅಂಗಡಿಯಲ್ಲಿ ಲಕ್ಷಾಂತರ ರೂ. ಕಳವು

ಉಪ್ಪಿನಂಗಡಿ: ಹಾಡಹಗಲೇ ಅಂಗಡಿಗೆ ನುಗ್ಗಿದ ಕಳ್ಳರು ಹಣವಿಡುವ ಡ್ರಾವರ್ ಓಪನ್ ಮಾಡಿ ಸುಮಾರು ಐದು ಲಕ್ಷ ರೂ. ನಗದನ್ನು ದೋಚಿದ ಘಟನೆ ಇಲ್ಲಿನ ಗಾಂಧಿಪಾರ್ಕ್ ಬಳಿಯ ಅಡಿಕೆ ಮತ್ತು ಕಾಡುತ್ಪತ್ತಿ ಮಾರಾಟದ ಅಂಗಡಿಯಾದ ಗುಂಡಿಜೆ ಟ್ರೇಡರ್ಸ್‌ನಲ್ಲಿ ಅ.27ರಂದು ನಡೆದಿದೆ.

ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಅಂಗಡಿ ಮಾಲಕರು ತನ್ನ ಅಂಗಡಿಯ ಶಟರ್ ಅನ್ನು ಓಪನ್ ಆಗಿಯೇ ಇಟ್ಟು ಕ್ಯಾಷ್ ಡ್ರಾವರ್‌ಗೆ ಬೀಗ ಹಾಕಿ ತನ್ನ ಅಂಗಡಿ ಕೋಣೆಯಿರುವ ವಾಣಿಜ್ಯ ಸಂಕೀರ್ಣದ ಹಿಂಬದಿಯಲ್ಲಿರುವ ಶೌಚಾಲಯಕ್ಕೆ ತೆರಳಿದ್ದರು. ಬರುವಾಗ ಕ್ಯಾಷ್ ಡ್ರಾವರ್ ಅನ್ನು ಮುರಿದಿದ್ದು, ಅದರಲ್ಲಿದ್ದ ಸುಮಾರು ಐದು ಲಕ್ಷ ರೂ. ಕಳ್ಳತನವಾಗಿರುವುದು ಅವರ ಗಮನಕ್ಕೆ ಬಂದಿದೆ.

ಅಂಗಡಿಯಲ್ಲಿ ಸಿ.ಸಿ.ಕ್ಯಾಮರಾ ಇದ್ದರೂ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಘಟನೆಯ ದೃಶ್ಯ ರೆಕಾರ್ಡ್ ಆಗಲಿಲ್ಲ ಎಂದು ತಿಳಿದು ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article