ಬಂಟ್ವಾಳದಲ್ಲಿ ಅಕ್ರಮ ಗಣಿಗಾರಿಕೆ
Thursday, November 13, 2025
ಬಂಟ್ವಾಳ: ತಾಲೂಕಿನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಅಂಬ್ಡೇಲು ಎಂಬಲ್ಲಿ ಸ್ಪೋಟಕ ವಸ್ತುವನ್ನು ಬಳಸಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕಾ ಸ್ಥಳವನ್ನು ಪುಂಜಾಲಕಟ್ಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸ್ಥಳೀಯ ನಿವಾಸಿ ಜಯ ಬಂಗೇರ ಎಂಬವರು ಸ್ಪೋಟಕ ವಸ್ತುವನ್ನು ಬಳಸಿ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಬಂದ ದೂರಿನನ್ವಯ ಪೊಲೀಸರು ಸ್ಥಳಕ್ಕೆ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ಸಂದರ್ಭ ಜಯ ಬಂಗೇರ ಎಂಬವರ ಗುಡ್ಡೆ ಜಮೀನಿನಲ್ಲಿ ಕಪ್ಪು ಕಲ್ಲು ಗಣಿಗಾರಿಕೆ ನಡೆದಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ಸುಮಾರು 2-3 ಲೋಡು ಕಪ್ಪು ಕಲ್ಲುಗಳಿದ್ದದಲ್ಲದೆ ಬಂಡೆಯ ಮೇಲೆ 2-3 ಕಡೆಗಳಲ್ಲಿ ಕಂಪ್ರಶರ್ ಬಳಸಿ ತೂತು ಕೊರೆದು ಹೊಡೆದಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ, ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.