ಅಂಗಡಿಗೆ ಬೆಂಕಿ ಹಚ್ಚಿದ ಭೂಪ
Thursday, November 27, 2025
ಬಂಟ್ವಾಳ: ವ್ಯಕ್ತಿಯೋರ್ವ ಗೂಡಂಗಡಿಗೆ ಬೆಂಕಿ ಹಚ್ಚಿರುವ ಘಟನೆ ಬಂಟ್ವಾಳತಾಲೂಕಿನ ಅರಳಗ್ರಾಮದ ಶುಂಠಿಹಿತ್ಲು ಎಂಬಲ್ಲಿ ನಡೆದಿದೆ.
ಇಲ್ಲಿನ ಶೇಖಬ್ಬ ಎಂಬವರು ಶುಂಠಿಹಿತ್ತಿಲುನಿಂದ ನವಗ್ರಾಮ ಹೋಗುವ ರಸ್ತೆಯ ಬದಿಯಲ್ಲಿ ತಿಂಡಿ-ತಿನಿಸುಗಳ ಸಣ್ಣ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದು,ಸ್ಥಳೀಯ ನಿವಾಸಿ ರಾಜೇಶ್ ಎಂಬಾತ ಬೆಂಕಿ ಹಚ್ಚಿರುವ ಆರೋಪಿಯಾಗಿದ್ದಾನೆ ಎಂದು ದೂರಿನಲ್ಲಿತಿಳಿಸಲಾಗಿದೆ.
ಸುದ್ದಿ ತಿಳಿದ ಶೇಖಬ್ಬ ಹಾಗೂ ಮನೆ ಮಂದಿ ಅಗಮಿಸಿ ಸ್ಥಳೀಯರ ಸಹಕಾರದಲ್ಲಿ ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಲು ಯತ್ನಿಸಿದರಾದರೂ ಸಾಧ್ಯವಾಗದರಿಂದ ಬಳಿಕ ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿಗಳು ಅಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಅದಾಗಲೇ ಅಂಗಡಿಯಲ್ಲಿದ್ದ ಸೊತ್ತುಗಳು,ಟಾರ್ಪಾಲ್ ಎಲ್ಲವು ಬೆಂಕಿಗಾಹುತಿಯಾಗಿದೆ.ಈ ಘಟನೆಯಿಂದ ಸುಮಾರು 20 ಸಾ.ರೂ.ನಷ್ಟವುಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.