ರಿಪೇರಿ ನೆಪದಲ್ಲಿ ಕಳವು
ಮಂಗಳೂರು: ವಿದ್ಯುತ್ ವಯರ್ ಹಾಗೂ ಲೈಟ್ ರಿಪೇರಿ ಮಾಡುವ ನೆಪದಲ್ಲಿ ಮನೆಗಾಗಮಿಸಿದ ಅಪರಿಚಿತ ವ್ಯಕ್ತಿಯೋರ್ವ ಬೆಡ್ ರೋಂನ ಮಂಚದ ಅಡಿಯಲ್ಲಿಟ್ಟಿದ್ದ ಬ್ಯಾಗ್ ನಿಂದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬಂಟ್ವಾಳ ಸಜಿಪನಡು ಗ್ರಾಮದ ದೇರಾಜೆ ಎಂಬಲ್ಲಿ ನಡೆದಿದೆ.
ಇಲ್ಲಿನ ದೀಕ್ಷಿತ್ ಎಂಬವರಮನೆಯಲ್ಲಿಈ ಕಳವು ಕೃತ್ಯ ನಡೆದಿದ್ದು,ಅವರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇದು ದಾಖಲಾಗಿದೆ.
ನ.23 ರಂದುಮನೆ ಮಂದಿ ಮದುವೆ ಕಾರ್ಯಕ್ರಮಕ್ಕೆಂದು ಪಾಣೆಮಂಗಳೂರಿಗೆ ತೆರಳಿದ್ದು,ಮಧ್ಯಾಹ್ನ 2 ರಿಂದ 3 ಗಂಟೆಯ ನಡುವೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಮನೆಯಲ್ಲಿದ್ದ ಸರೋಜಿನಿಯವರಲ್ಲಿ ದೀಚುರವರು ಮನೆಯ ವಿದ್ಯುತ್ ವಯರ್ ಹಾಗೂ ಲೈಟ್ ಸರಿಪಡಿಸಲು ತಿಳಿಸಿದ್ದಾರೆಂದು ಹೇಳಿ ನಂಬಿಸಿದ್ದಾನೆ.
ಬಳಿಕ ಮನೆಯೊಳಗಡೆ ಹೋಗಿ ಬೆಡ್ ರೂಮಿನ ಮಂಚದ ಕೆಳೆಗೆ ಬ್ಯಾಗ್ ನಲ್ಲಿದ್ದ ಚಿನ್ನದ ಕಿವಿಯ ಬೆಂಡೋಲೆ, ಉಂಗುರ ಹಾಗೂ ನಗದು 6 ಸಾ.ರೂ ಹಣ ಕಳವುಗೈದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳುವಾದ ಸೊತ್ತು ಹಾಗೂ ಹಣದ ಒಟ್ಟು ಮೌಲ್ಯ 48 ಸಾ.ರೂ ಆಗಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಲೇಸಿ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.