ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಉತ್ಸವ ಪ್ರಯುಕ್ತ ರಥೋತ್ಸವ
Thursday, November 27, 2025
ಮೂಡುಬಿದಿರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಚಂಪಾ ಷಷ್ಠಿ ಉತ್ಸವ ಪ್ರಯುಕ್ತ ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ಧ್ವಜಾರೋಹಣ, ನವಕ ಕಲಶಾಭಿಷೇಕ, ಮಹಾಪೂಜೆ, ಶ್ರೀ ಮನ್ಮಹಾರಥೋತ್ಸವ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಬ್ರಾಹ್ಮಣ-ಸುಹಾಸಿನಿ ಆರಾಧನೆ, ಸಾರ್ವಜನಿಕ ಆಶ್ಲೇಷಬಲಿ ನಡೆಯಲಿದೆ. ಮಧ್ಯಾಹ್ನ ರಥೋತ್ಸವ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಕಡಂದಲೆ ದೊಡ್ಡಮನೆ, ಸದಸ್ಯರಾದ ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ ಕಡಂದಲೆ ಪರಾಡಿ, ಸುದರ್ಶನ್ ಶೆಟ್ಟಿ ಕಡಂದಲೆಗುತ್ತು., ಸುಬ್ಬಯ್ಯ ಶೆಟ್ಟ ಕಡಂದಲೆ ಬಂಡಸಾಲೆ. ನಮೃತಾ ಎಸ್. ಮಾರ್ಲ ಕಡಂದಲೆ ಪರಾಡಿ, ವಿಮಲಾ ಲೀಲಾಧರ್ ಕಟ್ಟಪುಣಿ, ಕೇಶವ ಬಾರಬೆಟ್ಟು ಕಡಂದಲೆ, ಕೆ.ಸುಂದರ ಗೌಡ, ಪ್ರಧಾನ ಅರ್ಚಕ ರಾಘವೇಂದ್ರ ಭಟ್, ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ, ಸಂತೋಷ್ ಶೆಟ್ಟಿ ಕಡಂದಲೆ ಪರಾಡಿ ಉಪಸ್ಥಿತರಿದ್ದರು.