ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ 2025: ಆಳ್ವಾಸ್ ಪದವಿಪೂರ್ವ ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ
Thursday, November 27, 2025
ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾವೇರಿ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರು ತಂಡ ಪ್ರಶಸ್ತಿಯನ್ನು ಪಡೆದುಕೊಂಡು ಒಟ್ಟು 09 ಪದಕಗಳೊಂದಿಗೆ ಆಳ್ವಾಸ್ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸ್ಪರ್ಧೆಯ ಫಲಿತಾಂಶ:
ಆರ್ಟಿಸ್ಟಿಕ್ ಪೇರ್ : ಬಾಲಕರ ವಿಭಾಗದಲ್ಲಿ ಚಂದ್ರಶೇಖರ ಮತ್ತು ಪೃಥ್ವಿಚಾರ್ - ಪ್ರಥಮ ಸ್ಥಾನ
ಆರ್ಟಿಸ್ಟಿಕ್ ಪೇರ್: ಬಾಲಕಿಯರ ವಿಭಾಗದಲ್ಲಿ ಸಂಜನಾ ಮತ್ತು ಕವನ - ದ್ವಿತೀಯ ಸ್ಥಾನ
ರಿದಮಿಕ್ ಪೇರ್: ಬಾಲಕರ ವಿಭಾಗದಲ್ಲಿ ಪೃಥ್ವಿಚಾರ್ ಮತ್ತು ಕುಮಾರ್ - ಪ್ರಥಮ ಸ್ಥಾನ
ರಿದಮಿಕ್ ಪೇರ್: ಬಾಲಕಿಯರ ವಿಭಾಗದಲ್ಲಿ ಕವನ ಮತ್ತು ಅನನ್ಯ - ಪ್ರಥಮ ಸ್ಥಾನ
ಆರ್ಟಿಸ್ಟಿಕ್ ಸಿಂಗಲ್: ಬಾಲಕರ ವಿಭಾಗದಲ್ಲಿ ಕುಮಾರ್ - ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ
ಆಳ್ವಾಸ್‌ನ ಐವರು ಕ್ರೀಡಾಪಟುಗಳು ರಾಷ್ಟç ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ವಿಜೇತರಾದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವರು ಅಭಿನಂದಿಸಿದ್ದಾರೆ.