ಪಾದಚಾರಿಗೆ ಬೈಕ್ ಢಿಕ್ಕಿ: ಗಾಯ

ಪಾದಚಾರಿಗೆ ಬೈಕ್ ಢಿಕ್ಕಿ: ಗಾಯ

ಬಂಟ್ವಾಳ: ಬೈಕ್ ಢಿಕ್ಕಿ ಹೊಡೆದು ಪಾದಚಾರಿಯೋರ್ವರು ಗಾಯಗೊಂಡ ಘಟನೆ ಕೊಳಕೆ ಮಸೀದಿ ಬಳಿ ಸಂಭವಿಸಿದೆ.

ಗಾಯಾಳು ಪಾದಚಾರಿಯನ್ನು ಅಬ್ದುಲ್ ಮಜೀದ್ ಎಂದು ಹೆಸರಿಸಲಾಗಿದೆ. ಇವರು ಕೊಳಕೆ ಮಸೀದಿ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೋರುಗುಡ್ಡೆ-ಕೊಳಕೆ ರಸ್ತೆಯಲ್ಲಿ ಬೋರುಗುಡ್ಡೆ ಕಡೆಯಿಂದ ಬಂದ ಬೈಕ್ ಹಿಬಂದಿಯಿಂದ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಪರಿಣಾಮ ಗಾಯಗೊಂಡ ಮಜೀದ್ ಅವರನ್ನು ಮಂಗಳೂರಿನ ಖಾಸಿಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article