ಹೊಸಕಟ್ಟೆ ಉತ್ಸವದೊಂದಿಗೆ ಶುಭಾರಂಭ: ಮೊದಲ ದಿನದ ಉತ್ಸವ ಸಂಪನ್ನ

ಹೊಸಕಟ್ಟೆ ಉತ್ಸವದೊಂದಿಗೆ ಶುಭಾರಂಭ: ಮೊದಲ ದಿನದ ಉತ್ಸವ ಸಂಪನ್ನ


ಧರ್ಮಸ್ಥಳ: ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಜರುಗಿದ ಲಕ್ಷದೀಪೋತ್ಸವದ ಪ್ರಥಮ ದಿನವಾದ ಶನಿವಾರ ರಾತ್ರಿ ಹೊಸಕಟ್ಟೆ ಉತ್ಸವ ನಡೆಯಿತು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಸಂಪ್ರದಾಯಬದ್ಧವಾಗಿ ಜರುಗಿತು.


ಶ್ರೀ ಮಂಜುನಾಥ ಸ್ವಾಮಿಗೆ ಗುಡಿಯೊಳಗೆ ವಿಶೇಷ ಪೂಜೆಗಳನ್ನು ನೆರವೇರಿಸಿದ ನಂತರ, ದೇವಾಲಯದ ಒಳಾಂಗಣದಲ್ಲಿ ಉತ್ಸವ ಮೂರ್ತಿಯೊಂದಿಗೆ 16 ಸುತ್ತು ಪ್ರದಕ್ಷಿಣೆ ಮಾಡಲಾಯಿತು. ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಆವರಣದ ಸುತ್ತಲೂ ಚೆಂಡೆ, ನಾದಸ್ವರ, ಸಂಗೀತ, ಕೊಳಲು, ಶಂಖ ಸೇರಿದಂತೆ ಸರ್ವವಾದ್ಯಗಳೊಂದಿಗೆ ಉತ್ಸವಮೂರ್ತಿಯನ್ನು ಪಲ್ಲಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ದೇವಸ್ಥಾನದ ಹೊರಾಂಗಣದಲ್ಲಿ ಭಕ್ತರು ಮಂಜುನಾಥನಿಗೆ ನಮಿಸಿ ದೀಪಗಳನ್ನು ಬೆಳಗಿ ಪ್ರಾರ್ಥಿಸಿದರು.


ದೇವಾಲಯದಿಂದ ಉತ್ಸವಮೂರ್ತಿಯನ್ನು ಹೊರಗೆ ತಂದು ಪಲ್ಲಕ್ಕಿಗೆ ಆರತಿಯನ್ನು ಬೆಳಗುವುದರೊಂದಿಗೆ ಮೆರವಣಿಗೆ ಆರಂಭವಾಯಿತು. ತಮಟೆ ವಾದ್ಯ, ಜಾಗಟೆ, ದೀವಟಿಗೆ ಮತ್ತು ನೃತ್ಯಮಾಡುವ ಬೊಂಬೆ ವೇಷಧಾರಿಗಳೊಂದಿಗೆ ಹೊರಟ ಮೆರವಣಿಗೆ ದೇಗುಲದ ಎದುರಿನಲ್ಲಿರುವ ವಸಂತ ಮಹಲಿನ ಹೊಸಕಟ್ಟೆಗೆ ತಲುಪಿತು. ದೇವರಿಗೆ ಅಷ್ಟಸೇವೆಯನ್ನು ನಡೆಸಲಾಯಿತು. ಚತುರ್ವೇದಗಳ ಪಠಣ, ಸಂಗೀತ, ಮೌರಿ, ನೃತ್ಯ ಮತ್ತು ಸರ್ವವಾದ್ಯಗಳನ್ನು ಒಳಗೊಂಡ ಅಷ್ಟಸೇವೆಯೊಂದಿಗೆ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ದೇವಾಲಂಯದ ಆನೆಗಳಾದ ಶೀವಾಣಿ, ಲಕ್ಷ್ಮಿ ಜನರೊಂದಿಗೆ ಹೆಜ್ಜೆ ಹಾಕಿದವು.


ವಸಂತ ಮಹಲಿನಲ್ಲಿ ಪೂಜೆ ನೆರವೇರಿದ ಬಳಿಕ ಅಲಂಕೃತ ಬೆಳ್ಳಿ ರಥದಲ್ಲಿ ದೇವರ ಮೂರ್ತಿಯನ್ನು ವಿರಾಜಮಾನಗೊಳಿಸಿ, ಆರತಿ ಬೆಳಗಿ, ಭಕ್ತರ ಸಮ್ಮುಖದಲ್ಲಿ ದೇವಳಕ್ಕೆ ಒಂದು ಸುತ್ತು ರಥವನ್ನು ಎಳೆದು ಬಂದು ದೇವರ ಮೂರ್ತಿಗೆ ಮಂಗಳಾರತೆ ಬೆಳಗಿ ಭಕ್ತಿಭಾವದಿಂದ ರಥ ಎಳೆದು ಮಂಜುನಾಥನ ಅನುಗ್ರಹ ಪಡೆದು ಧನ್ಯತೆಯಿಂದ ತೃಪ್ತರಾದರು. ಮೂರ್ತಿಯನ್ನು ಯಥಾರೀತಿಯಲ್ಲಿ ದೇಗುಲದೊಳಗೆ ಕರೆತರಲಾಯಿತು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article