ಕಾಸರಗೋಡು ಜಿಲ್ಲೆ-ಮಂಗಳೂರು ನಗರ ಪೊಲೀಸ್ ಮುಖ್ಯಸ್ಥರ ಸಭೆ
Sunday, November 23, 2025
ಕಾಸರಗೋಡು: ಕಾಸರಗೋಡಿನಲ್ಲಿ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದಂಗವಾಗಿ ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿ ತಪಾಸಣೆ ನಡೆಸುವ ನಿಟ್ಟಿನಲ್ಲಿ ಕಾಸರಗೋಡು ಮತ್ತು ದ.ಕ. ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರು ಮಾತುಕತೆ ನಡೆಸಿದರು.
ಮಂಗಳೂರು ನಗರ ಪೊಲೀಸ್, ಕಾಸರಗೋಡು ಜಿಲ್ಲಾ ಪೊಲೀಸರ ನೇತೃತ್ವದಲ್ಲಿ ಮಂಗಳೂರು ನಗರ ಆಯುಕ್ತರ ಕಚೇರಿಯಲ್ಲಿ ಶನಿವಾರ ಸಭೆ ನಡೆಯಿತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಕಣ್ಣೂರು ವಲಯ ಡಿಐಜಿ ಯತೀಶ್ಚಂದ್ರ, ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಜಯ್ ಭರತ್ ರೆಡ್ಡಿ, ಮಂಗಳೂರು ನಗರ ಉಪ ಆಯುಕ್ತ ಮಿಥುನ್ ಎಚ್.ಎನ್., ಕಾಸರಗೋಡು ಎಎಸ್ಪಿ ಡಾ. ನಂದಗೋಪಾಲ್ ಉಪಸ್ಥಿತರಿದ್ದರು.
ಉಭಯ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು, ಒಳರಸ್ತೆಗಳಲ್ಲಿ ತೀವ್ರ ತಪಾಸಣೆ ನಡೆಸಲು, ತಲೆ ಮರೆಸಿಕೊಂಡಿರುವ ವಿವಿಧ ಪ್ರಕರಣಗಳ ಆರೋಪಿಗಳನ್ನು ಬಂಧಿಸಲು ಪರಸ್ಪರ ಹಸ್ತಾಂತರಕ್ಕೆ ತೀರ್ಮಾನಿಸಲಾಯಿತು.