ಜ.6 ರಿಂದ ಕರದಾಳದಿಂದ 700 ಕಿ.ಮಿ. ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ
ಅವರು ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಪಾದಯಾತ್ರೆಯನ್ನು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಸಮುದಾಯದ ಮುಖಂಡರುಗಳಾದ ಬಿ.ಕೆ. ಹರಿಪ್ರಸಾದ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದ್ದು, ಬೆಂಗಳೂರಿಗೆ ತಲುಪಿದ ನಂತರ ಫ್ರೀಡಂಪಾರ್ಕ್‌ನಲ್ಲಿ ಅಮರಣ ಸತ್ಯಾಗ್ರಹ ನಡೆದಲಾಗುವುದು ಎಂದರು.
ಕಳೆದ ಸರ್ಕಾರ ಇರುವಾಗ ನಮ್ಮ ಸಮುದಾಯದ ಆಗ್ರಹದಂತೆ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಕುಲಶಾಸ್ತ್ರ ಅಧ್ಯನಕ್ಕೆ 25 ಲಕ್ಷ ನೀಡಲಾಗಿದೆ. ಬಳಿಕ ಪ್ರತೀ ವರ್ಷ ನಿಗಮಕ್ಕೆ 25 ಲಕ್ಷ ನೀಡುವುದಾಗಿ ತಿಳಿಸಿದ್ದು, ಇಲ್ಲಿಯ ತನಕ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ಮಂಜುನಾಥ ಪೂಜಾರಿ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಘೋಷಿಸಿದ್ದು, ಇಲ್ಲಿಯ ತನಕ ಅವರಿಗೆ ಹಕ್ಕು ಪತ್ರ ನೀಡಿಲ್ಲ ಎಂದು ತಿಳಿಸಿದರು.
ನಮ್ಮ ಸಮುದಾಯವು ಹಿಂದುಳಿದ ವರ್ಗದ ಸಾಲಿನಲ್ಲಿ ಬರಲಿದ್ದು, ಈ ಸಮುದಾಯದ ಅಡಿಯಲ್ಲಿ 104 ಜಾತಿಗಳು ಬರುತ್ತಿದ್ದು, ಅದರಲ್ಲಿ ಪ್ರಮುಖವಾಗಿ 10 ಜಾತಿಗಳಿದ್ದು, ಮೊದಲಿಗೆ ಕುರುಬರು ಇದ್ದು, ನಂತರ ನಾವು ಬರುತ್ತೇವೆ. ಅಲ್ಲಿ ನಮಗೆ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ನಮ್ಮಲ್ಲಿ ಇಂದಿಗೂ ಶೌಚಾಲಯ, ಮನೆ ಮೂಲಭೂತ ಸೌಕರ್ಯಗಳಿಲ್ಲದೆ ಅನೇಕ ಮಂದಿ ಬಳಲುತ್ತಿದ್ದಾರೆ. ಆದುದರಿಂದ ನಮ್ಮ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸುವಂತೆ ಆಗ್ರಹಿಸುವುದಾಗಿ ತಿಳಿಸಿದರು.
ಪಾದಯಾತ್ರೆಯ ಮೊದಲು ಪೂರ್ವಬಾವಿ ಸಭೆಯು ಡಿ.7 ರಂದು ಕುದ್ರೋಳಿ ದೇವಸ್ಥಾನದಲ್ಲಿ ನಡೆಯಲಿದ್ದು, ಅಂದು ಸಮುದಾಯದ ಮುಖಂಡರುಗಳು ಭಾಗವಹಿಸಲಿದ್ದಾರೆ. ಸಭೆಗೆ ಸಮುದಾಯದ ಹಿರಿಯರಾದ ಜನಾರ್ದನ ಪೂಜಾರಿ ಅವರನ್ನು ಆಹಗವಾನಿಸಲಾಗುವುದು ಎಂದು ಹೇಳಿದರು.
ಎಲ್ಲಾ ಜಾತಿಯವರು ಒಂದಾಗಿ ಜಾತಿಯ ಮುಳಿವಿಗೆ ಕೆಲಸ ಮಾಡುತ್ತಿದ್ದಾರೆ. ಶೃಂಗೇರಿ ಮಠದಲ್ಲಿ ವಕ್ಕಲಿಗರ ಸಭೆಯಲ್ಲಿ ಡಿ.ಕೆ. ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಮೊದಲಾವರು ಸೇರುತ್ತಾರೆ. ಆಗ ಅವರಿಗೆ ಯಾವುದೇ ಪಕ್ಷ ಇರುವುದಿಲ್ಲ. ಅದೇ ರೀತಿ ನಮ್ಮ ಸಮುದಾಯದಲ್ಲೂ ಎಲ್ಲರೂ ಸಮುದಾಯದ ಉಳಿವಿಗಾಗಿ ಒಂದಾಗಬೇಕು ಎಂದು ಆಗ್ರಹಿಸಿದರು.
ನಮ್ಮ ಸಮುದಾಯದವರಿಗೆ ಅಬಕಾರಿ ಸಚಿವ ಸ್ಥಾನ ನೀಡಿ:
ನಮ್ಮ ಸಮುದಾಯದ ಮೂಲ ಕಸುಬು ಸೇಂದಿ ತೆಗೆಯುವುದು, ಅದನ್ನು ಪರಿಗಣಿಸಿ ನೆರೆ ರಾಜ್ಯಗಳಲ್ಲಿ ನಮ್ಮ ಸಮುದಾಯದವರಿಗೆ ಅಬಕಾರಿ ಸಚಿವ ಸ್ಥಾನವನ್ನು ನೀಡಿದ್ದು, ಆ ಸ್ಥಾನವನ್ನು ನಮ್ಮ ರಾಜ್ಯದಲ್ಲಿಯೂ ನಮ್ಮ ಸಮುದಾಯದವರಿಗೆ ನೀಡಬೇಕು. ಬಿ.ಕೆ. ಹರಿಪ್ರಸಾದ್ ಅವರು ಸಮರ್ಥ ನಾಯಕರಾಗಿದ್ದಾರೆ, ಹಾಗೆಂದು ಅವರಿಗೆ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸುವುದಿಲ್ಲ ಎಂದು ಮಾರ್ಮಿಕವಾಗಿ ಆಗ್ರಹಿಸಿದರು.
ಕಾಂಗ್ರೆಸ್‌ನ ಮೋಲ್ಜಾತಿಯವರೇ ಸೋಲಿಸಿದ್ದು:
ನಮ್ಮ ಸಮುದಾಯದಲ್ಲಿ ಸಚಿವರು, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳಿದ್ದು, ಅವರುಗಳಿಗೆ ಉತ್ತಮ ರೀತಿಯ ಸ್ಥಾನಮಾನ ನೀಡುತ್ತಿಲ್ಲ. ಅವರನ್ನು ಕಡೆಗಳಿಸಲಾಗುತ್ತಿದೆ. ನಮ್ಮ ಸಮುದಾಯದ ಮುಖಂಡ ಜನಾರ್ದನ ಪೂಜಾರಿ ಅವರನ್ನು ಕಾಂಗ್ರೆಸ್‌ನ ಮೇಲ್ಜಾತಿಯವರೇ ಸೋಲಿಸಿದರು ಎಂದು ಆರೋಪಿಸಿದರು.
ಸ್ವಾಮೀಜಿಗಳಿಗೆ ಪ್ರೊವಿಜನ್ ಲೈನ್ ನೀಡಿ:
ಬಿಜೆಪಿ ಅಧಿಕಾರಕ್ಕೆ 12 ವರ್ಷ ಆಯ್ತು. ಹಿಂದುತ್ವದ ಬಗ್ಗೆ ಮಾತನಾಡುವವರು ಇಲ್ಲಿಯ ತನಕ ಸ್ವಾಮೀಜಿಗಳಿಗೆ ಏನನ್ನೂ ಮಾಡಲಿಲ್ಲ. ನಾವು ಧರ್ಮದ ಕೆಲಸ ಮಾಡುವವರು ನಮ್ಮ ಸ್ವಂತಃ ಕೆಲಸ ಮಾಡುವುದಲ್ಲ. ಆದುದರಿಂದ ವಿಮಾನ ನಿಲ್ದಾಣಗಳಲ್ಲಿ ಸ್ವಾಮೀಜಿಗಳಿಗೆ ಪ್ರತ್ಯೇಕ ಪ್ರೊವಿಜನ್ ಲೈನ್ ಮಾಡಬೇಕು. ಹಾಗೆಯೇ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್‌ಗೇಟ್‌ಗಳಲ್ಲಿ ಕೂಡ ಉಚಿತವಾಗಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.