ಅಧ್ಯಯನದಿಂದ ಉತ್ತಮ ಬರವಣಿಗೆ ಸಾಧ್ಯ: ಮಿಥುನ್ ಉಡುಪ ಕೊಡೆತ್ತೂರು
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ ಮಂಗಳಗಂಗೆ ವಾರ್ಷಿಕ ಸಂಚಿಕೆ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶದ ಸಹಯೋಗದೊಂದಿಗೆ ಗ್ರಂಥಾಲಯ ಸಪ್ತಾಹದ ಅಂಗವಾಗಿ ಹಳೆ ಸ್ಮರಣ ಸಂಚಿಕೆ ವೀಕ್ಷಣೆ ಮತ್ತು ವಿದ್ಯಾರ್ಥಿಗಳಿಗಾಗಿ ಲೇಖನ ಬರಹ ಮತ್ತು ಕಥಾ ಬರಹ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಬರೆದ ಲೇಖನವನ್ನು ಕೆಲ ವರ್ಷಗಳ ಬಳಿಕ ತೆರೆದು ನೋಡಿದಾಗ ಖುಷಿ ನೀಡುವಂತಿರಬೇಕು. ಪ್ರತಿದಿನವೂ ವ್ಯಕ್ತಿ ಬೆಳವಣಿಗೆ ಹೊಂದುವ ನಿಟ್ಟಿನಲ್ಲಿ ಆಲೋಚನೆ ಇಟ್ಟುಕೊಂಡಿರಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಬರವಣಿಗೆ ಕುರಿತು ಆಸಕ್ತಿ ಹುಟ್ಟಿ, ಬರೆಯುವ ಪ್ರಯತ್ನ ಮಾಡಬೇಕು ಎಂದು ಮಂಗಳಗಂಗೆ ವಾರ್ಷಿಕ ಸಂಚಿಕೆಯ ಸಂಪಾದಕ ಡಾ. ಮಾಧವ ಎಂ. ಕೆ. ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ಬದುಕಿನ ಪ್ರತಿ ಹಂತದಲ್ಲಿಯೂ ಬರವಣಿಗೆ ಗುಣಮಟ್ಟ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಸ್ವಂತ ಬರವಣಿಗೆ ಚಿಕ್ಕದಾದರೂ ನಿಮ್ಮದೇ ಆಗಿರಲಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕಿ ಡಾ. ವನಜಾ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಜಯವಂತ್ ನಾಯಕ್ ಉಪಸ್ಥಿತರಿದ್ದರು.