ಪೌಷ್ಟಿಕ ಆಹಾರವಾದ ಗೋಮಾಂಸವನ್ನು ಸರಕಾರ ವಿದೇಶದಿಂದ ಆಮದುಗೊಳಿಸಿ ಜನರಿಗೆ ವಿಕ್ರಯಿಸಲಿ: ಕೆ. ಅಶ್ರಫ್

ಪೌಷ್ಟಿಕ ಆಹಾರವಾದ ಗೋಮಾಂಸವನ್ನು ಸರಕಾರ ವಿದೇಶದಿಂದ ಆಮದುಗೊಳಿಸಿ ಜನರಿಗೆ ವಿಕ್ರಯಿಸಲಿ: ಕೆ. ಅಶ್ರಫ್

ಮಂಗಳೂರು: ಸರಕಾರ ತನ್ನ ಉದ್ದಿಮೆ ಯೋಜನೆ ಎಂಬಂತೆ, ಪೌಷ್ಟಿಕ ಆಹಾರವಾದ ಗೋಮಾಂಸವನ್ನು ವಿದೇಶದಿಂದ ಆಮದುಗೊಳಿಸಿ, ಭಕ್ಷಣಾರ್ಥಿಗಳಿಗೆ ಆದ್ಯತೆ ಮೇರೆಗೆ ಪಡಿತರ ನೆಲೆಯಲ್ಲಿ ವಿತರಿಸಲಿ ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಹಾಲಿ ಉದ್ಭವವಾಗಿರುವ ಗೊಸಂಬಂಧಿತ ಸಮಸ್ಯೆಗಳು ಒಂದು ನಿರ್ಧಿಷ್ಟ ಸಮುದಾಯದ ಮೇಲೆ ಕರಾಳವಾದ ಪರಿಣಾಮವನ್ನು ಬೀರುತ್ತಿರುವ ಈ ಕ್ಲಿಷ್ಟಕರ ಸಂಧರ್ಭದಲ್ಲಿ, ಸರಕಾರ ಗೋಸಂಭಂಧಿತ ಸರ್ವ ಚಟುವಟಿಕೆಗಳನ್ನು ನಿಷೇಧ ಹೇರಲಿ.

ಹಾಲಿ ಭಾರತವು ಬೀಫ್ ರಫ್ತು ಚಟುವಟಿಕೆಯಲ್ಲಿ ವಿಶ್ವದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದು, ದೇಶೀಯ ಜನರ ಬಳಕೆಗಾಗಿ ವಿದೇಶದಿಂದ ಉತ್ತಮವಾಗಿ ಸಂಸ್ಕರಿಸಲಾದ ಪೌಷ್ಟಿಕ ಆಹಾರವಾದ ಗೊಮಾಂಸ ವನ್ನು ಆಮದುಗೊಳಿಸಿ ಜನರಿಗೆ ವಿತರಿಸುವ ಉದ್ಯಮವನ್ನು ನಡೆಸಲಿ. ಭಾರತದ ಗೋವು ನಂಬಿಕೆಯ ವಿಷಯದೊಂದಿಗೆ ಬೆಸೆದುಕೊಂಡಿರುವುದರಿಂದ ಸರಕಾರ ಈ ಬಗ್ಗೆ ಸ್ಪಷ್ಟ ನಿಲುವು ಹೊಂದಲಿ.

ಹಾಗಾದಲ್ಲಿ ಮಾತ್ರಾ ಹಾಲಿ ಸೃಷ್ಟಿಯಾಗುವ ಗೋಭಕ್ಷತೆ ಮತ್ತು ಗೋನಂಬಿಕೆಯ ಮಧ್ಯದ ಘರ್ಷಣೆ ನಿವಾರಣೆ ಆಗಬಹುದು ಮತ್ತು ಹಾಲಿ ಅಸ್ತಿತ್ವದಲ್ಲಿ ಇರುವ ಗೋಶಾಲೆಗಳು ಸಮೃದ್ಧಿ ಹೊಂದಬಹುದು ಎಂದು ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article