ಸ್ವಾವಲಂಬಿ ಜೀವನಕ್ಕೆ ಉದ್ಯೋಗದ ಜೊತೆಗೆ ಕೌಶಲ್ಯವೂ ಬಹಳ ಅಗತ್ಯ: ಪ್ರದೀಪ್ ಡಿಸೋಜಾ

ಸ್ವಾವಲಂಬಿ ಜೀವನಕ್ಕೆ ಉದ್ಯೋಗದ ಜೊತೆಗೆ ಕೌಶಲ್ಯವೂ ಬಹಳ ಅಗತ್ಯ: ಪ್ರದೀಪ್ ಡಿಸೋಜಾ


ಮಂಗಳೂರು: ಸ್ವಾವಲಂಬಿ ಜೀವನಕ್ಕೆ, ಆರ್ಥಿಕ ಅಭಿವೃದ್ಧಿಗೆ ಉದ್ಯೋಗ ಅಗತ್ಯ. ಆದರೆ ಅದರೊಂದಿಗೆ ಕೌಶಲ್ಯವೂ ಬಹಳ ಅಗತ್ಯವಿದೆ ಎಂದು ಮಂಗಳೂರು ಜಿಲ್ಲಾ ಕೌಶಲ್ಯಾಭಿವೃದ್ಧಿ ಕೇಂದ್ರದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ ಹೇಳಿದರು.


ಅವರು ಇಂದು ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್) ಧಾರವಾಡ, ಸಿಡಾಕ್, ಮಂಗಳೂರು ಇದರ ಪ್ರಾಯೋಜನೆಯೊಂದಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಉದ್ಯಮಶೀಲತಾ ಜಾಗೃತಿ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.


ಬೇರೆ ದೇಶದಲ್ಲಿ ಕೌಶಲ್ಯಗಳ ಮಟ್ಟ ಬಹಳಷ್ಟಿದ್ದು, ನಮ್ಮ ದೇಶದಲ್ಲಿ ಬಹಳ ಕಡಿಮೆ ಇದೆ. ಆದುದರಿಂದ ನಾವು ಸ್ವಾ-ಉದ್ಯೋಗ ಮಾಡುವುದು ಹೇಗೆ, ಯಾವ ರೀತಿಯಲ್ಲಿ ಲೋನ್ ಪಡೆಯಬೇಕು ಎಂಬುವುದನ್ನು ಕಲಿಯಲು ಈ ಕಾರ್ಯಗಾರ ಸಹಕಾರಿಯಾಗಿದೆ ಎಂದ ಅವರು ಉದ್ಯಮ ಮಾಡಲು ಇಚ್ಛಾಶಕ್ತಿ ಬೇಕು. ನಮ್ಮಲ್ಲಿ ಒಳ್ಳೆಯ ಆಲೋಚನೆ ಇರುತ್ತದೆ ಆದರೆ ಅದನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬುವುದು ಗೊತ್ತಿರುವುದಿಲ್ಲ ಅಂತವರಿಗೆ ಈ ಕಾರ್ಯಗಾರ ಅಗತ್ಯವಾಗಿದೆ ಎಂದರು.


ಮಂಗಳೂರಿನ ಸಿಡಾಕ್‌ನ ಉಪನಿರ್ದೇಶಕ ಶಿವಾನಂದ ಎಲಿಗಾರ್ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉದ್ಯಮಶೀಲತಾ ಬೀಜವನ್ನು ಬಿತ್ತುವ ನಿಟ್ಟಿನಲ್ಲಿ ಈ ಕಾರ್ಯಗಾರವನ್ನು ಆಯೋಜನೆ ಮಾಡಿಕೊಳ್ಳಲಾಗಿದೆ. ನಮಗೆ ಇರುವ ಸಾಮರ್ಥ್ಯದ ಮೇಲೆ ನಾವು ಉದ್ಯಮಶೀಲರಾಗಲು ಸಾಧ್ಯವೇ ಇಂದು ಗುರುತಿಸಿಕೊಳ್ಳಬಹುದು. ಉದ್ಯಮ ಶೀಲತೆಯನ್ನು ನಡೆಸಲು ತಯಾರಿ ಬಹಳ ಅಗತ್ಯವಿದೆ. ಆದುದರಿಂದ ಈ ಕಾರ್ಯಗಾರದ ಮುಖ್ಯ ಉದ್ದೇಶ ಪ್ರತಿಯೊಬ್ಬರೂ ಉದ್ಯೋಗದಾರರನ್ನಾಗಿಸುವುದು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ವಹಿಸಿ ಮಾತನಾಡಿ, ಜೀವನದಲ್ಲಿ ನಾವು ಏನು ಆಗುತ್ತೇವೆ ಎಂಬ ಆಯ್ಕೆ ಬಹಳ ಅಗತ್ಯವಾಗುತ್ತದೆ. ಉದ್ಯಮಶೀಲತೆ ಎಂದಾಕ್ಷಣ ದೊಡ್ಡ ಕಂಪೆನಿಯನ್ನು ಪ್ರಾರಂಭಿಸುವುದು ಮಾತ್ರವಲ್ಲ, ಸಣ್ಣ ಮಟ್ಟದ ಉದ್ಯಮ ಪ್ರಾರಂಭಿಸಿ ಮುಂದೆ ದೊಡ್ಡ ಮಟ್ಟದಲ್ಲಿ ಮಾಡಲು ಸಾಧ್ಯ ಎಂದ ಅವರು ನಾವು ಏನನ್ನಾದರೂ ಮಾಡಬೇಕು ಎಂಬ ಇಚ್ಛಾಶಕ್ತಿ ಇರಬೇಕು. ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಇಂತಹ ಕಾರ್ಯಗಾರಗಳು ಬಹಳ ಅಗತ್ಯ ಎಂದು ಹೇಳಿದರು.


ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದುಗ್ಗಪ್ಪ ಕಜೆಕಾರ್, ಐಕ್ಯೂಎಸಿ ಸಹ-ಸಂಯೋಜಕಿ ಡಾ. ಜ್ಯೋತಿಪ್ರಿಯಾ, ವಿಜ್ಞಾನ ವಿಭಾಗದ ಸಂಯೋಜಕಿ ಪ್ರೊ. ವಸಂತಿ ಪಿ., ಸದಸ್ಯರಾದ ಶೋಭಾಮಣಿ ಉಪಸ್ಥಿತರಿದ್ದರು.


ಭಾಗ್ಯಶ್ರೀ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು. ವೃತ್ತಿ ಮಾರ್ಗಕೋಶ ಹಾಗೂ ಉದ್ಯೋಗ ಕೋಶದ ಸಂಯೋಜಕಿ ಡಾ. ಮಾಲತಿ ಕೆ. ಸ್ವಾಗತಿಸಿದರು. ತನ್ವಿತ ವಂದಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article