ಪತ್ರಕರ್ತ ರಾಮಚಂದ್ರ ಭಟ್ ಅವರಿಗೆ ಸನ್ಮಾನ
Friday, November 14, 2025
ಮಂಗಳೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ದಿಶಾ ಲಿಜನ್‌ನ ಯೂತ್ ವಿಂಗ್‌ನ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಕಾರ್ಯಕ್ರಮದಲ್ಲಿ ಮಂಗಳೂರಿನ ಡೀಲ್ಸ್ ಗ್ರೂಪ್ ಹಾಗೂ ಟೀಂ ಬಿ ಹ್ಯೂಮನ್‌ನ ಸಂಸ್ಥಾಪಕ ಆಸೀಫ್ ಡೀಲ್ಸ್ ಅವರ ಉಪಸ್ಥಿತಿಯಲ್ಲಿ ಪತ್ರಕರ್ತ ರಾಮಚಂದ್ರ ಭಟ್ ಅವರನ್ನು ಗೌರವಿಸಲಾಯಿತು.
ಇವರು ಕಳೆದ 35 ವರ್ಷಗಳಿಂದ ಮಂಗಳೂರಿನ ವಿವಿಧ ವಾರ್ತಾ ಸಂಚಿಕೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಇವರನ್ನು ನಾವು ಗುರುತಿಸಿ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ದಿಶಾ ಹಾಗೂ ಯೂತ್ ವಿಂಗ್ ಸೇರಿ ಅವರನ್ನು ಸನ್ಮಾನಿಸಲಾಯಿತು.
ನಮ್ಮ ಸೀನಿಯರ್ ಚೇಂಬರ್ ಮಂಗಳೂರು ದಿಶಾ ಇದರ ಅಧ್ಯಕ್ಷೆ ಮೇರಿ ಶಾಂತಿಸ್, ಯೂತ್ ವಿಂಗ್ಸ್ ಅಧ್ಯಕ್ಷ ಏಂಜಲ್ ಸಿಕ್ವೆರಾ, ಕಾರ್ಯದರ್ಶಿ ರಶ್ಮಿ ಸಿಕ್ವೇರಾ, ಮಂಗಳೂರಿನ ಹಲವಾರು ಸಮಾಜ ಸೇವೆಯಲ್ಲಿ ತೊಡಗಿರುವ ಬಿ ಹ್ಯೂಮನ್‌ನ ಆಸೀಫ್ ಡೀಲ್ಸ್, ಇಮ್ತಿಯಾಜ್ ಅಹ್ಮದ್, ಅಬ್ಬಾಸ್ ಉಚ್ಚಿಲ್, ಇಮ್ತಿಯಾಜ್ ಗೋಲ್ಡನ್, ಮಾಣಿಕ್ ಇದ್ದಿಕುಂಜಿ ಹನೀಫ್ ತೋಡಾರ್, ಅಬ್ದುಲ್ ಗಫರ್ ಮತ್ತಿತರರು ಉಪಸ್ಥಿತರಿದ್ದರು.