ಬೀಚ್‌ನಲ್ಲಿ ಚಿನ್ನಾಭರಣ ಕಳವು: ಆರೋಪಿ ಸೆರೆ

ಬೀಚ್‌ನಲ್ಲಿ ಚಿನ್ನಾಭರಣ ಕಳವು: ಆರೋಪಿ ಸೆರೆ

ಮಂಗಳೂರು: ಪಣಂಬೂರು ಬೀಚ್‌ನಲ್ಲಿ  ಚಿನ್ನಾಭರಣಗಳಿದ್ದ ಬ್ಯಾಗ್ ಕಳವುಗೈದ ಅಪ್ರಾಪ್ತ ವಯಸ್ಕ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತನಿಂದ ಕಳವು ಗೈಯ್ಯಲಾಗಿದ್ದ 12 ಗ್ರಾಂ ತೂಕದ ಚೈನ್, 2 ಗ್ರಾಂ ತೂಕದ ಲಾಕೆಟ್, ತಲಾ 2 ಗ್ರಾಂ ತೂಕದ ಎರಡು ಉಂಗುರ ಮತ್ತು 4 ಗ್ರಾಂ ತೂಕದ ಕಿವಿಯೋಲೆ ಹಾಗೂ ರಿಯಲ್ಮಿ ಕಂಪೆನಿಯ ಮೊಬೈಲ್ ಪೋನ್-1, ಸ್ಯಾಂಸಂಗ್ S24 ಅಲ್ಟ್ರಾ ಮೊಬೈಲ್ ಪೋನ್-1 ಸೇರಿ ಒಟ್ಟು 3.33 ಲಕ್ಷ ರೂ.ಮೌಲ್ಯದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಸ್ವಾತಿ ನಂದಿಪಳ್ಳಿ ಎಂಬವರು ತನ್ನ ಸ್ನೇಹಿತ ರೋಹಿತ್ ವೆಮ್ಮಲೆಟಿ ರವರೊಂದಿಗೆ ಬೆಳಗ್ಗೆ ಪಣಂಬೂರು ಬೀಚಿಗೆ ಬಂದವರು ಕಪ್ಪು ಬಣ್ಣದ ಬ್ಯಾಗ್‌ವೊಂದರಲ್ಲಿ ಮೊಬೈಲ್ ಫೋನ್‌ಗಳು, ಚಿನ್ನಾಭರಣಗಳನ್ನು ಹಾಕಿ ಸಮುದ್ರ ತೀರದಲ್ಲಿಟ್ಟು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ಯಾರೋ ಕಳ್ಳ ಬ್ಯಾಗ್ ಸಮೇತ ಚಿನ್ನಾಭರಣ ಮೊಬೈಲ್ ಕಳವುಗೈದಿದ್ದಾಗಿ ಸ್ವಾತಿ ಅವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ನ.24 ರಂದು ದೂರು ನೀಡಿದ್ದರು. 

ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸರು ೪೮ಗಂಟೆಯ ಒಳಗಾಗಿ ಕಳ್ಳನನ್ನು ಬಂಧಿಸಿ, ಕಳವಾಗಿದ್ದ ಸಂಪೂರ್ಣ ಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಆರೋಪಿಯ ಪತ್ತೆ ಕಾರ್ಯಾಚರಣೆಯನ್ನು ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಕೆ.ರವಿಶಂಕರ್, ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಪಣಂಬೂರು ಪೊಲೀಸ್ ಉಪ ನಿರೀಕ್ಷರಾದ ಜ್ಞಾನಶೇಖರ, ಶ್ರೀಕಲಾ ಹಾಗೂ ಸಿಬ್ಬಂದಿಗಳಾದ ಸಿ.ಎಚ್.ಸಿ. ಸಯ್ಯದ್ ಇಮ್ತಿಯಾಝ್, ಪಿ.ಸಿ.ಗಳಾದ ರಾಕೇಶ್ ಮತ್ತು ಶರಣಬಸವ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article