ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಶಾಸಕ ಕಾಮತ್ ಭೇಟಿ
Saturday, November 1, 2025
ಮಂಗಳೂರು: ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ರಥಬೀದಿ ಮಂಗಳೂರು ಇಲ್ಲಿ ಕಾರ್ತಿಕ ಮಾಸದ ಅಂಗವಾಗಿ ಕ್ಷೇತ್ರದ ಶ್ರೀ ನಾಗಲಿಂಗ ಸ್ವಾಮಿ ಗುರುಮಠದಲ್ಲಿ ನ.11 ರಂದು ಏಕಾದಶೀ ದಿನ ಸೂರ್ಯೋದಯದಿಂದ ಆರಂಭಗೊಂಡಿದ್ದು, ನ.2 ರಂದು ಸೂರ್ಯೋದಯಕ್ಕೆ ಮಂಗಳವಾಗುವ ಏಕಾಹ ಭಜನೆಯ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಆಗಮಿಸಿದರು.
ಶ್ರೀ ಗುರುಮಠದ ಪ್ರಧಾನ ಅರ್ಚಕ ಕೆ. ಸುದರ್ಶನ್ ಪುರೋಹಿತರು ಶಾಸಕರಿಗೆ ಭಜನೆಯ ಪ್ರಸಾದ ನೀಡಿದರು. ಬಿಜೆಪಿ ಮುಖಂಡ ಬಿ. ಮೋಹನ್, ಕ್ಷೇತ್ರದ ಮಾಜಿ ಆಡಳಿತ ಮಂಡಳಿಯ ಸದಸ್ಯರಾದ ಕೆ.ಕೆ. ವಿಠ್ಠಲ ಆಚಾರ್ಯ ಮತ್ತು ಕೌಶಿಕ್ ಪಯ್ಯಲ್ ಉಪಸ್ಥಿತರಿದ್ದರು.