ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: 'ಗ್ರಂಥಪಾಲಕರ ಮಾತು: ಅನುಭವ, ಒಳನೋಟ ಮತ್ತು ನಾವೀನ್ಯತೆ' ವೆಬಿನರ್
Friday, November 21, 2025
ಮಂಗಳೂರು: ದಕ್ಷಿಣ ಕನ್ನಡ ಮತ್ತು ಕೊಡಗು ಗ್ರಂಥಪಾಲಕರ ಸಂಘ (ರಿ.) ಉಡುಪಿ ಇದರ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನವೆಂಬರ್ 14 ರಿಂದ 20 ನವೆಂಬರ್ ತನಕ 'ಗ್ರಂಥಪಾಲಕರ ಮಾತು: ಅನುಭವ, ಒಳನೋಟ ಮತ್ತು ನಾವೀನ್ಯತೆ' ಎಂಬ ವಿಷಯದ ಬಗ್ಗೆ ಏಳು ದಿನಗಳ ಕಾಲ ವೆಬಿನಾರ್ ನಡೆಯಿತು.
ಪ್ರತೀ ದಿನ ಸಂಜೆ 7 ಗಂಟೆಯಿಂದ 8 ಗಂಟೆಯ ತನಕ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಗ್ರಂಥಪಾಲಕರು ತಮ್ಮ ವೃತ್ತಿ ಜೀವನದ ಅನುಭವವನ್ನು ಹಂಚಿಕೊಂಡು, ಪ್ರಸಕ್ತ ವೃತ್ತಿ ಜೀವನದ ಸಮಸ್ಯೆ, ಸವಾಲುಗಳನ್ನು ಎದುರಿಸಲು ಉಪಯುಕ್ತವಾದ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದ ಮೊದಲನೇ ದಿನದಲ್ಲಿ ಉದ್ಘಾಟನಾ ಭಾಷಣಕಾರರಾಗಿ ಡಾ. ಪೂವಪ್ಪ ಕಣಿಯೂರು ಅವರು ಓದುಗರಾಗಿ ಗ್ರಂಥಾಲಯದ ಬಗ್ಗೆ ಇರುವ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಏಳು ದಿನಗಳ ಸರಣಿ ಕಾರ್ಯಕ್ರಮದಲ್ಲಿ ನಿವೃತ್ತ ಗ್ರಂಥಪಾಲಕರಾದ ಡಾ. ಸುಜಾತ, ಟಿ. ಇಂದಿರಾ, ಬಾಲಕೃಷ್ಣ, ಎಸ್.ಎನ್. ಭಟ್, ಪುಟ್ಟಸ್ವಾಮಿ ಹಾಗೂ ಡಾ. ವಾಸಪ್ಪ ಗೌಡ ಇವರು ಸಂಪನ್ಮೂಲ ವ್ಯಕ್ತಿಗಳಾಗಿದ್ದು, ತಮ್ಮ ವೃತ್ತಿ ಜೀವನದ ಅನುಭವ ಹಾಗೂ ಸಲಹೆ ಸೂಚನೆಗಳನ್ನು ನೀಡಿದರು. ಡಿಕೆಕೆಎಲ್ಎ(ರಿ.), ಉಡುಪಿ ಇದರ ಸದಸ್ಯರು ಹಾಗೂ ಅಭ್ಯಾಗತರು ಜಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

