ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ ರಚನೆ

ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿ ರಚನೆ


ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಡಿ.14 ರಂದು ಮಂಗಳೂರಿನ ಗುರುಪುರ ಕೈಕಂಬದ ಮೇಗಾ ಪ್ಲಾಝಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಹೆಚ್. ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಗುರುಪುರ ಕೈಕಂಬದಲ್ಲಿ ನಡೆಯಿತು. 

ಸಮ್ಮೇಳನದ ಅಂಗವಾಗಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಮಂಗಳೂರು ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದೆಂದು ತೀರ್ಮಾನಿಸಲಾಯಿತು. ಸಮ್ಮೇಳನದ ಯಶಸ್ಸಿಗೆ ಸಹಕರಿಸಲು ಸುಮಾರು 50 ಮಂದಿ ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. 

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯ ಬಿ.ಎಸ್. ಮುಹಮ್ಮದ್ ಮತ್ತು ಕಾರ್ಯಕ್ರಮದ ಸದಸ್ಯ ಸಂಚಾಲಕ ತಾಜುದ್ದೀನ್ ಅಮ್ಮುಂಜೆ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಹಾಜಿ ಎಂ.ಹೆಚ್. ಮೊಹಿದಿನ್ ಅಡ್ಡೂರು, ಅಧ್ಯಕ್ಷರಾಗಿ ಡಾ. ಇ.ಕೆ.ಎ. ಸಿದ್ದೀಕ್ ಅಡ್ಡೂರು, ಉಪಾಧ್ಯಕ್ಷರುಗಳಾಗಿ ಎಂ.ಜಿ. ಸಾಹುಲ್ ಹಮೀದ್ ಗುರುಪುರ, ಸಲೀಂ ಹಂಡೇಲ್, ದಾವೂದ್ ಬಂಗ್ಲಗುಡ್ಡೆ, ಉಸ್ಮಾನ್ ಹಾಜಿ ಏರ್ ಇಂಡಿಯಾ ಮತ್ತು ಅಬ್ದುಲ್ ಸಲಾಂ ಬೂಟ್ ಬಝಾರ್, ಪ್ರಧಾನ ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ ಬಜ್ಪೆ, ಕಾರ್ಯದರ್ಶಿಗಳಾಗಿ ಎಂ.ಡಿ. ನವಾಝ್, ಅಬ್ದುಲ್ ಜಲೀಲ್ ಅರಳ, ಇಸ್ಮಾಯಿಲ್ ಬಶೀರ್, ಬಿ.ಹೆಚ್. ಮುಹಮ್ಮದ್ ಅಶ್ರಫ್ ಬಾಳಿಕೆ, ಖಲಂದರ್ ಬೀಬಿ ಕೈಕಂಬ, ಝೀಯಾನಾ ಬಜ್ಪೆ, ಅಬ್ದುಲ್ ರಹ್ಮಾನ್ ಎಡಪದವು, ಅಶ್ರಫ್ ಬಜ್ಪೆ, ಅಬ್ದುಲ್ ರಝಾಕ್ ಮರ್ಕಝ್, ಎಸ್.ಎಂ. ಅಝೀಝ್ ಕಂದಾವರ ಮತ್ತು ಹಸನಬ್ಬ ಎಡಪದವು ಹಾಗೂ ಗೌರವ ಸಲಹೆಗಾರರಾಗಿ ಅಲಿ ಅಬ್ಬಾಸ್ ಕೈಕಂಬ, ಎಂ.ಜಿ. ಮುಹಮ್ಮದ್ ಹಾಜಿ ತೋಡಾರ್ ಮತ್ತು ಮಾಮು ಮನೇಲ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article