ಪಂಚಾಯತ್ ಪಂಪ್‌ಶೆಡ್‌ಗೆ ಕಿಡಿಗೇಡಿಗಳಿಂದ ಹಾನಿ
Sunday, November 23, 2025
ಉಜಿರೆ: ಮುಂಡಾಜೆ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ವ್ಯವಸ್ಥೆಯ ಪಂಪ್‌ಶೆಡ್‌ಗೆ ಕಿಡಿಗೇಡಿಗಳು ಹಾನಿ ಉಂಟು ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಮುಂಡಾಜೆ ಸೀಟು-ಕೊಡಂಗೆ-ಕಾಯರ್ತೋಡಿ ರಸ್ತೆಯ ಸೀಟು ಚಡಾವಿನ ಕೆಳಭಾಗದಲ್ಲಿ ಪಂಚಾಯಿತಿಯನಲ್ಲಿ ನೀರಿನ ಬೋರ್‌ವೆಲ್, ಪಂಪ್‌ಶೆಡ್ ಇದೆ. ಇಲ್ಲಿಂದ ನೀರನ್ನು ಕೊಟ್ರೊಟ್ಟು ಎಂಬಲ್ಲಿರುವ ಟ್ಯಾಂಕಿಗೆ ಕೊಂಡೊಯ್ದು, ಗ್ರಾಮದ 200 ಕ್ಕಿಂತ ಅಧಿಕ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.
ಇಲ್ಲಿರುವ ಪಂಪ್‌ಶೆಡ್ ಬಾಗಿಲಿಗೆ ಬೀಗ ಹಾಕಲಾಗಿರುತ್ತದೆ. ಕಿಡಿಗೇಡಿಗಳು ಶೆಡ್‌ನ ಹಲವು ಭಾಗಗಳಿಗೆ ಕಲ್ಲು ಅಥವಾ ಇತರ ಆಯುಧದಿಂದ ಜಜ್ಜಿ ಹಾನಿ ಉಂಟು ಮಾಡಿರುವುದು ಕಂಡು ಬಂದಿದೆ.
ಪಂಪ್‌ಶೆಡ್ ಸಮೀಪವೆ ವಿದ್ಯುತ್ ಪರಿವರ್ತಕ, ಶೆಡ್ ಒಳಗೆ ಮೀಟರ್, ಮೈನ್ ಸ್ವಿಚ್, ಸ್ಟಾರ್ಟರ್ ಸಹಿತ ಅನೇಕ ವಿದ್ಯುತ್ ಉಪಕರಣಗಳಿವೆ. ಇಂತಹ ಅಪಾಯಕಾರಿ ಸ್ಥಳದಲ್ಲಿ ಕಿಡಿಗೇಡಿಗಳು ಯಾವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನ ಮೂಡಿದೆ.