ಮೆಸ್ಕಾ೦ನಲ್ಲಿ ಕನ್ನಡ ರಾಜ್ಯೋತ್ಸವ
ಕಾರ್ಯಕ್ರಮದಲ್ಲಿ ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ರಾಜ್ಯೋತ್ಸವ ಸ೦ದೇಶ ನೀಡಿದ ಮೆಸ್ಕಾಂ ತಾಂತ್ರಿಕ ನಿರ್ದೇಶಕ ಹರೀಶ್ ಕುಮಾರ್ ಅವರು ಭವ್ಯ ಇತಿಹಾಸ, ಪರಂಪರೆ ಹೊಂದಿರುವ ತಾಯಿ ಭಾಷೆ ಕನ್ನಡವನ್ನು ಎ೦ದೂ ಮರೆಯಬಾರದು. ಕನ್ನಡ ಭಾಷೆಗೆ ದೈನಂದಿನ ಆಡಳಿತ ವ್ಯವಹಾರದಲ್ಲಿ ಅದ್ಯತೆ ನೀಡುವ ಮೂಲಕ ಕನ್ನಡಾಂಬೆಯ ಸೇವಾ ಕೈಂಕಯ೯ದಲ್ಲಿ ತೊಡಗಿಸಿಕೊಳ್ಳೋಣ. ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕಾಯ೯ವನ್ನು ಮಾಡಬೇಕು. ಕನ್ನಡ ಭಾಷೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ನಮ್ಮ ಕೊಡುಗೆ ನೀಡಬೇಕು ಎಂದರು.
ಮೆಸ್ಕಾಂನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿ೦ದ ಅಚರಿಸಿಕೊ೦ಡು ಬರಲಾಗುತ್ತಿದ್ದು, ಇದಕ್ಕಾಗಿ ಮೆಸ್ಕಾಂ ಬಳಗವನ್ನು ಅಭಿನಂದಿಸುತ್ತೇನೆ ಎಂದವರು ಹೇಳಿದರು.
ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್, ಪ್ರಧಾನ ವ್ಯವಸ್ಥಾಪಕ ಡಾ. ಬಿ.ಎಸ್. ಮಂಜುನಾಥಸ್ವಾಮಿ, ಕವಿಪ್ರನಿನಿ ಯೂನಿಯನ್‌ಗಳ ಪದಾಧಿಕಾರಿಗಳಾದ ನವೀನ್ ಕುಮಾರ್, ತೇಜಸ್ವಿ, ನಿತೇಶ್ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು, ಉಪಸ್ಥಿತರಿದ್ದರು.
ಮೆಸ್ಕಾಂ ಸಾರ್ವಜನಿಕ ಸಂಪರ್ಕ ಅಧಿಕಾರಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಪುಷ್ಪರಾಜ್ ಸ್ವಾಗತಿಸಿ, ಕಂಪೆನಿ ಕಾರ್ಯದರ್ಶಿ ಪ್ರಭಾತ್ ಜೋಶಿ ವಂದಿಸಿದರು.