ಶುಲ್ಕ ಪಾವತಿಗೆ ದಂಡ ವಸೂಲಿ ಶ್ರೀ ದೇವಿ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಲು ಎಸ್‌ಎಫ್‌ಐ ಆಗ್ರಹ

ಶುಲ್ಕ ಪಾವತಿಗೆ ದಂಡ ವಸೂಲಿ ಶ್ರೀ ದೇವಿ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಲು ಎಸ್‌ಎಫ್‌ಐ ಆಗ್ರಹ


ಮಂಗಳೂರು: ನಗರದ ಶ್ರೀ ದೇವಿ ಕಾಲೇಜಿನ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಪಾವತಿಗೆ ವರ್ಷಾಂತ್ಯಕ್ಕೂ ಮೊದಲೇ ವಿಳಂಬ ಪಾವತಿಯ ಹೆಸರಿನಲ್ಲಿ ದಿನಕ್ಕೆ 100 ರೂ.ನಂತೆ ದಂಡ ವಸೂಲಿ ಮಾಡುತ್ತಿದ್ದು ವಿಪರೀತ ದಂಡ ಕಟ್ಟಲು ಕಾಲೇಜು ಮಂಡಳಿ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿರುವುದು ಶಿಕ್ಷಣ ನೀತಿಗೆ ವಿರುದ್ಧವಾದುದು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಆರೋಪಿಸಿದೆ.

ಇಂದು ವಿದ್ಯಾರ್ಥಿಗಳು ಶ್ರೀದೇವಿ ಕಾಲೇಜಿನ ದಂಡ ಪಾವತಿ ನೀತಿಯ ವಿರುದ್ಧ ತರಗತಿ ಬಹಿಷ್ಕರಿಸಿ ನಡೆಸಿರುವ ಹೋರಾಟವನ್ನು ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಬೆಂಬಲಿಸಿದ್ದು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಜಿಲ್ಲಾಡಳಿತ ಶ್ರೀ ದೇವಿ ಕಾಲೇಜಿನ ಕಾನೂನು ಬಾಹಿರ ಮತ್ತು ವಿದ್ಯಾರ್ಥಿ ವಿರೋಧಿ ನೀತಿಯ ವಿರುದ್ಧ ಕ್ರಮ ಜರಗಿಸಬೇಕೆಂದು ಒತ್ತಾಯಿಸಿದೆ.

ಅಲ್ಲದೆ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಗೂ ದಂಡ ವಿಧಿಸಲಾಗುತ್ತಿದೆ ಆರು ಅಂತಸ್ತಿನ ಕಾಲೇಜು ಕಟ್ಟಡದಲ್ಲಿ ಒಂದೊಂದು ಮಹಡಿಯಲ್ಲಿ ಮೂರು ತರಗತಿಗಳಲ್ಲಿ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇವಲ ಒಂದು ಶೌಚಾಲಯ ಮಾತ್ರ  ಇರುವುದರಿಂದ ಟಾಯ್ಲೆಟ್ ಬಳಸಿ ಬರುವಷ್ಟರಲ್ಲಿ ತರಗತಿ ಮುಗಿದಿರುತ್ತದೆ ಶೌಚಾಲಯದ ಕೊರತೆಯೂ ಹಾಜರಾತಿ ಕಡಿಮೆ ಆಗಲು ಕಾರಣವಾಗಿದೆ ಅಲ್ಲದೆ ಕಾಲೇಜು ಕಟ್ಟಡದ ಲಿಫ್ಟನ್ನೂ ಸರಿಯಾಗಿ ವಿದ್ಯಾರ್ಥಿಗಳಿಗೆ ಬಳಸಲು ಬಿಡುತ್ತಿಲ್ಲ, ಶುಚಿತ್ವದ ಬಗ್ಗೆ ಕಾಲೇಜು ಮಂಡಳಿ ಗಮನ ಹರಿಸುತ್ತಿಲ್ಲ ಎಂದು ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ವಿನುಷ ರಮಣ ಮತ್ತು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ.

ಅಲ್ಲದೆ ಕಾಲೇಜು ನಡೆಸಿರುವ ದಂಡ ವಸೂಲಿ ಪ್ರಕರಣವನ್ನು ವಿರೋಧಿಸಿ ಹೋರಾಟ ನಡೆಸಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಅವರಿಗೆ ಕಿರುಕುಳ ನೀಡಿದರೆ ಶ್ರೀದೇವಿ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article