ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ
Wednesday, November 12, 2025
ಮಂಗಳೂರು: ಸುರತ್ಕಲ್ ನ ಡಾ.ಶಶಿಕಾಂತ್ ಕೌಡೂರು ಅವರು ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಡಾ.ಶಶಿಕಾಂತ ಕೌಡೂರು ಅವರು ನ.1ಮತ್ತು 2 ರಂದು ಬೆಂಗಳೂರಿನಲ್ಲಿ ಜರುಗಿದ ಕರ್ನಾಟಕ ರಾಜ್ಯಮಟ್ಟದ ಮಾಸ್ಟರ್ಸ್ ಈಜುಸ್ಪರ್ಧೆಯಲ್ಲಿ ಐವತ್ತು ಮೀ. ಬ್ಯಾಕ್ ಸ್ಟ್ರೋಕ್ ಶೈಲಿಯಲ್ಲಿ ಚಿನ್ನ ಹಾಗೂ 50*4 ಟೀಮ್ ಮೆಡ್ಲೆ ರಿಲೇಯಲ್ಲಿ ಕಂಚು ಗಳಿಸಿದರು.
ಡಾ. ಕೌಡೂರು ಅವರು ಎನ್ಐಟಿಕೆ ಸುರತ್ಕಲ್ನ ಪ್ರಾಧ್ಯಾಪಕರಾಗಿದ್ದಾರೆ ಹಾಗೂ ಎನ್ಐಟಿಕೆ ಸ್ವಿಮಿಂಗ್ ಕ್ಲಬ್ ನ ಸದಸ್ಯರಾಗಿದ್ದಾರೆ.
ಇವರು ನ.21 ರಿಂದ 23ರ ವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಈಜುಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ಓIಖಿಏ ಸ್ವಿಮ್ಮಿಂಗ್ ಪೂಲ್ ನ ತರಬೇತುದಾರ ಸಂತೋಷ ಪಿ.ಎಂ.ತರಬೇತಿ ನೀಡಿರುತ್ತಾರೆ.