ಅಶ್ವಥ ಕಟ್ಟೆಗೆ ಮೇಲ್ಛಾವಣಿ ಉದ್ಘಾಟನೆ: ಕಟ್ಟೆ ಪೂಜೆಯಲ್ಲಿ ಶಾಸಕ ಕಾಮತ್ ಭಾಗಿ
Saturday, November 22, 2025
ಮಂಗಳೂರು: ತ್ರಿಮೂರ್ತಿ ಸೇವಾ ಸಮಿತಿ (ರಿ.) ಬಿಜೈ, ಆನೆಗುಂಡಿ ಇದರ ಆವರಣದಲ್ಲಿರುವ ಅಶ್ವಥ ಕಟ್ಟೆಗೆ ಮೇಲ್ಛಾವಣಿ ಅಳವಡಿಸಲಾಗಿದ್ದು ಅದರ ಉದ್ಘಾಟನಾ ಸಮಾರಂಭ ಹಾಗೂ ಕಟ್ಟೆಯ ವಾಸ್ತು ಪೂಜೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಭಾಗವಹಿಸಿದರು.
ಬಳಿಕ ಅವರು ಮಾತನಾಡಿ, ಸ್ಥಳೀಯರ ಬೇಡಿಕೆ ಹಾಗೂ ಭಕ್ತರ ಅನುಕೂಲಕ್ಕಾಗಿ ಇಲ್ಲಿನ ಅಶ್ವಥ ಕಟ್ಟೆಗೆ ಹಾಗೂ ಮೇಲ್ಛಾವಣಿಗೆ ಸಹಕಾರ ನೀಡಿರುವುದು ತೃಪ್ತಿ ತಂದಿದೆ. ಎಲ್ಲರಿಗೂ ಇದರಿಂದ ಉಪಯೋಗವಾದರೆ ಅದೇ ತೃಪ್ತಿ ಎಂದರು. ವಾರ್ಡ್ ಅಧ್ಯಕ್ಷ ಕೆ. ನಾರಾಯಣ ರವರು ಮಾತನಾಡಿ, ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಇಲ್ಲಿನ ಅಶ್ವಥ ಕಟ್ಟೆಗೆ ಶಾಸಕ ವೇದವ್ಯಾಸ ಕಾಮತ್ ರವರು ನಮ್ಮ ಮನವಿಗೆ ಸ್ಪಂದಿಸಿ ಸಂಪೂರ್ಣ ಸಹಕಾರ ನೀಡಿದ್ದರು. ಅದರ ಉದ್ಘಾಟನೆಯಾದಾಗಲೇ ಇಲ್ಲಿನ ಭಕ್ತರ ಅನುಕೂಲಕ್ಕೆ ಅಗತ್ಯವಿರುವ ಮೇಲ್ಛಾವಣೆಯನ್ನೂ ಒದಗಿಸಿ ಕೊಡುತ್ತೇನೆಂದು ಭರವಸೆ ನೀಡಿದ್ದರು. ಇದೀಗ ಅದೂ ಸಹ ಈಡೇರಿದ್ದು ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ನೀಡುತ್ತೇನೆ ಎಂದಿರುವ ಶಾಸಕರಿಗೆ ಬಿಜೈ 31 ನೇ ವಾರ್ಡ್ ನ ಜನತೆ ಹಾಗೂ ತ್ರಿಮೂರ್ತಿ ಸೇವಾ ಸಮಿತಿಯ ಸರ್ವ ಸದಸ್ಯರ ಪರವಾಗಿ ಅನಂತ ಕೋಟಿ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಪ್ರಶಾಂತ್ ಆಳ್ವ, ಜಯಕುಮಾರ್, ಋತ್ವಿಕ್ ಕದ್ರಿ, ಹಿರಿಯರಾದ ನಾರಾಯಣ ಮಾಸ್ಟರ್, ತ್ರಿಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರಾದ ವಸಂತ್ ಸಹಿತ ಎಲ್ಲಾ ಪದಾಧಿಕಾರಿಗಳು ಹಾಗೂ ಬಿಜೆಪಿ ಪ್ರಮುಖರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.
