ನ.14-20: ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿ. ಯಿಂದ ಸಹಕಾರ ಸಪ್ತಾಹ

ನ.14-20: ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿ. ಯಿಂದ ಸಹಕಾರ ಸಪ್ತಾಹ


ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ “ವಿಶಿಷ್ಟ ಸಾಧನ ಪ್ರಶಸ್ತಿ”ಯನ್ನು ಸತತ ಎರಡು ಬಾರಿಗೆ ಪಡೆದ ಹಳೆಯಂಗಡಿ ಪ್ರಿಯದಶಿನಿ ಕೋ -ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಸಹಕಾರ ಸಪ್ತಾಹ 2025ರ ಪೂರಕವಾಗಿ ಒಂದು ವಾರದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನ. 14ರಂದು ಹಳೆಯಂಗಡಿ ಪ್ರಧಾನ ಕಛೇರಿಯಲ್ಲಿ ಸಹಕಾರ ಸಪ್ತಾಹ ಧ್ವಜಾರೋಹಣವನ್ನು ಮುಲ್ಕಿ ವಿವಿಧೋದ್ದೇಶ ಸಹಕಾರ ಸಂಘ ( ಕ್ಷೀರಸಾಗರ )ಇದರ ಅಧ್ಯಕ್ಷರಾದ ಗೋಪಿನಾಥ ಪಡಂಗ ರವರು ನೆರವೇರಿಸಲಿರುವರು ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ, ಹಳೆಯಂಗಡಿ ಪಿ.ಸಿ.ಎಬ್ಯಾಂಕ್ ಮಾಜಿ ಅಧ್ಯಕ್ಷರಾದ ಮಾಧವ ತಿಂಗಳಾಯ, ಹಳೆಯಂಗಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶರ್ಲಿ ಬಂಗೇರ ಇವರನ್ನು ಗೌರವಿಸುವುದರ ಜೊತೆಗೆ ಈ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೈ ಕೃಷ್ಣ ಕೋಟ್ಯಾನ್ ರವರನ್ನು ಗೌರವಿಸಲಾಗುವುದು.

ನ.15 ರಂದು ಹಳೆಯಂಗಡಿ ಇಂದಿರಾ ನಗರದ ಇಂದಿರಾ ಗಾಂಧಿ ಸಭಾಭವನದಲ್ಲಿ ಸಂಗಮ ಮಹಿಳಾ ಮಂಡಲ ಇಂದಿರಾನಗರಇದರ ಸಹಯೋಗದೊಂದಿಗೆ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು ಇವರ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು ಇಲ್ಲಿಯ ಮುಖ್ಯ ಆಡಳಿತ ಅಧಿಕಾರಿ ಡಾ. ಎಚ್ ಶಿವಾನಂದ ಪ್ರಭು ಇವರು ಶಿಬಿರದ ಉದ್ಘಾಟನೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಲಜ ಪಾಣಾರ್ ಮತ್ತು ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಖಾದರ್, ಪದ್ಮಾವತಿ ಶೆಟ್ಟಿ, ಅಬ್ದುಲ್ ಅಜಿಜ್, ನೀತು ನಿರಂಜಲ, ಶಶಿಕಲಾ ಕರಿತೋಟ, ಸುಚಿತ್ರ ಪ್ರಸನ್ನ ಭಾಗವಹಿಸಲಿದ್ದಾರೆ.

ನ.16ರಂದು ಪಡುಬಿದ್ರಿ ಶಾಖೆ ಆಶ್ರಯದಲ್ಲಿ ಶ್ರೀನಿವಾಸ ಆಸ್ಪತ್ರೆ ಮುಕ್ಕ ,ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ , ತರಂಗಿಣಿ ಮಿತ್ರ ಮಂಡಳಿ ಪಡುಬಿದ್ರಿ, ಎಸ್.ಪಿ.ವಿ.ಪಿ ಮತ್ತು ಪಿ.ಜಿ.ಹೆಚ್.ಎಸ್ ಆರೋಗ್ಯ ನಿಧಿ ಚಾರಿಟೇಬಲ್ ಟ್ರಸ್ಟ್ ಪಡುಬಿದ್ರಿ ಇದರ ಸಹಯೋಗದಲ್ಲಿ ಗಣಪತಿ ಪ್ರೌಢಶಾಲೆ ಪಡುಬಿದ್ರಿ ಇಲ್ಲಿ ಉಚಿತ ವೈದ್ಯಕೀಯ ಸಾರ್ವಜನಿಕ ಶಿಬಿರ ನಡೆಯಲಿರುವುದು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೌಕ್ತಸರರಾದ ಭವಾನಿ ಶಂಕರ್ ಹೆಗ್ಡೆ ಪೇಟೆ ಮನೆ, ಮುಖ್ಯ ಅತಿಥಿಗಳಾಗಿ ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಜೆ ಶೆಟ್ಟಿ, ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಎಲುಬು ಮತ್ತು ಮೂಳೆ ವಿಭಾಗದ ಮುಖ್ಯಶಸ್ತ್ರ ಚಿಕಿತ್ಸಾಕರಾದ ಡಾ. ಶಶಿ ರಾಜ್ ಶೆಟ್ಟಿ, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜಶ್ರೀ ಕಿಣಿ, ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಅನುರಾಧ ಪಿ ಎಸ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಅಶೋಕ.ಕೆ ಭಾಗವಹಿಸಲಿದ್ದಾರೆ. 

ತರಂಗಿಣಿ ಮಿತ್ರ ಮಂಡಳಿಯ ಗೌರವಾಧ್ಯಕ್ಷರಾದ ಪಿ ಸದಾಶಿವ ಆಚಾರ್, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹಳೆಯಂಗಡಿ ನಿರ್ದೇಶಕರಾದ ಗಣೇಶ್ ಪ್ರಸಾದ್, ಪಡುಬಿದ್ರಿ ಆರೋಗ್ಯ ನಿಧಿ ಚಾರಿಟೇಬಲ್ ಟ್ರಸ್ಟ್‌ನ ಕೋಶಾಧಿಕಾರಿ ರಮಾಕಾಂತ್ ರಾವ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೂರ್ತೆದಾರರ ಮಹಾಮಂಡಲದ ಮಾಜಿ ಅಧ್ಯಕ್ಷರಾದ ಪಿ.ಕೆ ಸದಾನಂದ ಮತ್ತು ಪಡುಬಿದ್ರಿ ಸಹಕಾರ ವ್ಯವಸಾಯ ಸೊಸೈಟಿ ಸೊಸೈಟಿಯ ನಿರ್ದೇಶಕರಾದ ಗಿರೀಶ್ ಪಳಿಮಾರು ಇವರನ್ನು ಗೌರವಿಸಲಾಗುವುದು.

ನ.17ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ “ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ ಎನ್ ರಾಜೇಂದ್ರ ಕುಮಾರ್ “ಅವರ ಭಾವಚಿತ್ರ ಬಿಡಿಸುವುದು ಬಿಡಿಸುವ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಚಲನಚಿತ್ರ ನಟಿ ಕುಮಾರಿ ಚಿರಶ್ರೀ ಅಂಚನ್ ಹಳೆಯಂಗಡಿ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಪಂಜದ ಗುತ್ತು ಶಾಂತರಾಮ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಕೆಮ್ರಾಲ್ ಇಲ್ಲಿಯ ಸಹ ಶಿಕ್ಷಕರಾದ ಶ್ರೀಮತಿ ಮಂಜುಳಾ ಶೆಟ್ಟಿ ಮತ್ತು ಹಳೆಯಂಗಡಿ ಪೂಜಾ ಟ್ಯೂಷನ್ ಕ್ಲಾಸಸ್‌ನ ಗೋಪಾಲಕೃಷ್ಣ ಬಿ. ಕೋಟ್ಯನ್ ಭಾಗವಹಿಸಲಿದ್ದಾರೆ.

ನ.18 ರಂದು ಕಿನ್ನಿಗೋಳಿ ಶಾಖೆಯ ಆಶ್ರಯದಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜುದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಕಟೀಲು, ಸಮುದಾಯ ಆರೋಗ್ಯ ವಿಭಾಗ ಕೆ.ಎಂ.ಸಿ ಮಂಗಳೂರು, ಖಿಲ್ರಿಯಾ ಜುಮ್ಮಾ ಮಸೀದಿ ಶಾಂತಿನಗರ ಗುತ್ತಕಾಡು, ನೂರುಲ್ಹು ದಾ ಎಸೋಸಿಯೇಷನ್(ರಿ)ಶಾಂತಿನಗರ ಗುತ್ತಕಾಡು, ರೋಟರಿ ಕ್ಲಬ್ ಕಿನ್ನಿಗೋಳಿ, ಜನನಿ ಜನಸೇವಾ ಸಂಘ ಉಳ್ಳಂಜೆ ಕಟೀಲು ಇದರ ಆಶ್ರಯದಲ್ಲಿ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಸಾರ್ವಜನಿಕ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಟಿ. ಹೆಚ್ ಮಯ್ಯದ್ದಿ, ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ. ಸಾಯಿನಾಥ ಶೆಟ್ಟಿ, ಖಿಲ್ರಿಯಾ ಜುಮ್ಮಾ ಮಸೀದಿ ಶಾಂತಿನಗರ ಗುತ್ತಕಾಡು ಇಲ್ಲಿಯ ಉಪಾಧ್ಯಕ್ಷರಾದ ನವಾಜ್ ಕಲ್ಕೆರೆ, ಮಂಗಳೂರು ಎ.ಪಿ.ಎಂ.ಸಿಯ ಪ್ರಮೋದ್ ಕುಮಾರ್, ನೂರುಲ್ಹುದಾ ಎಸೋಸಿಯೇಷನ್ (ರಿ) ಶಾಂತಿನಗರ ಗುತ್ತಕಾಡು ಇಲ್ಲಿಯ ಅಧ್ಯಕ್ಷರಾದ ನೂರುದ್ದೀನ್, ಗುತ್ತಕಾಡು ಖಿಲ್ರಿಯಾ ಜುಮ್ಮಾ ಮಸೀದಿ ಶಾಂತಿನಗರ ಇಲ್ಲಿನ ಮಾಜಿ ಅಧ್ಯಕ್ಷರಾದ ಟಿ ಕೆ ಅಬ್ದುಲ್ ಖಾದರ್, ಉಲ್ಲಂಜೆ ಜನನಿ ಜನಸೇವಾ ಸಂಸ್ಥೆಯ ಅಧ್ಯಕ್ಷರು ರೋ.ಪ್ರಕಾಶ್ ಕಿನ್ನಿಗೋಳಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘ ಮಾಜಿ ಉಪಾಧ್ಯಕ್ಷರು ಶೇಷ ರಾಮ ಶೆಟ್ಟಿ ಮತ್ತು ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಹಿರಿಯ ಅಧಿಕಾರಿ ವನಜಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು.

ನ. 19ರಂದು ಮೂಡಬಿದಿರೆ ಶಾಖೆಯ ಆಶ್ರಯದಲ್ಲಿ ಮೌಂಟ್ ರೋಜಾರಿ ಆಸ್ಪತ್ರೆ ಅಲಂಗಾರು ಮೂಡಬಿದಿರೆ ಮತ್ತು ಲಯನ್ಸ್ ಕ್ಲಬ್ ಅಲಂಗಾರು ಇದರ ಆಶ್ರಯದಲ್ಲಿ ಉಚಿತ ಸಾರ್ವಜನಿಕ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು ಈ ಕಾರ್ಯಕ್ರಮವನ್ನು ಮೂಡಬಿದಿರೆ ಪುರಸಭೆ ಸದಸ್ಯರಾದ ಪಿ.ಕೆ ತೋಮಸ್ ರವರು ಉದ್ಘಾಟನೆ ಮಾಡಲಿದ್ದಾರೆ ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ, ಕಲ್ಲಬೆಟ್ಟು ಕೋ ಆಪರೇಟಿವ್ ಸೊಸೈಟಿನ ಮಾಜಿ ಅಧ್ಯಕ್ಷರಾದ ಸುರೇಶ್ ಕೋಟ್ಯಾನ್ ಮತ್ತು ನೆಲ್ಲಿಕಾರು ಸಹಕಾರಿ ವ್ಯವಸಾಯ ಸಂಘದ ನಿವೃತ್ತ ಮ್ಯಾನೇಜರ್ ಅರುಣ್ ಕುಮಾರ್ ಜೈನ್‌ರವರನ್ನು ಅಭಿನಂದಿಸಲಾಗುವುದು.

ನ.20ರಂದು ಸಮಾರೋಪ ಸಮಾರಂಭವು ಹಳೆಯಂಗಡಿ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದು ಈ ಸೇವಾ ಕಾರ್ಯಕ್ರಮದ ಅಂಗವಾಗಿ ಅಶಕ್ತ ಅಂಗವಿಕಲರಿಗೆ ವೀಲ್ ಚೇರ್ ವಿತರಣೆ ಕಾರ್ಯಕ್ರಮ ನಡೆಯಲಿರುವುದು. ಈ ಕಾರ್ಯಕ್ರಮದಲ್ಲಿ ಬಹುಮಾನ ವಿತರಕರಾಗಿ ಶ್ರೀ ಕೊಡಮನಿತ್ತಾಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕೊಡಿಪಾಡಿ ಸುರತ್ಕಲ್ ಇಲ್ಲಿನ ಅಧ್ಯಕ್ಷರಾದ ರೂಪೇಶ್ ರೈ, ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಸಮಾಜ ಸೇವಕರು ವಿಲ್ಮಾ ಡಿಕೋಸ್ತ ಭಾಗವಿಸಲಿದ್ದಾರೆ ಎಂದು ಸೊಸೈಟಿ ಅಧ್ಯಕ್ಷರಾದ ಹೆಚ್ ವಸಂತ್ ಬೆರ್ನಾಡ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ  ಪ್ರತಿಭಾ ಕುಳಾಯಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಜೊತೆಗೆ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article