ಪವರ್ ಫ್ರೆಂಡ್ಸ್, ಶಾಮಿಯಾನ ಮಾಲಕರ ಸಂಘದಿಂದ ಅಂಚೆ ಜನ ಸಂಪಕ೯ ಅಭಿಯಾನ: 651ಮಂದಿ ಆಧಾರ್ ನೋಂದಣಿ, 245 ಮಂದಿ ಆರೋಗ್ಯ ವಿಮೆ ನೋಂದಣಿ
Monday, November 17, 2025
ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ, ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಭಾನುವಾರ ಕನ್ನಡ ಭವನದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ, ಆಧಾರ್ ನೋಂದಣಿ, ತಿದ್ದುಪಡಿ, ಅಪಘಾತ ಹಾಗೂ ಆರೋಗ್ಯ ವಿಮಾ ಶಿಬಿರ ನಡೆಯಿತು.
ಉದ್ಯಮಿ ಶ್ರೀಪತಿ ಭಟ್ ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇಂದ್ರ ಸರ್ಕಾರದ ಮುತುವರ್ಜಿಯಿಂದ ಅಂಚೆ ಕಛೇರಿಗಳು ಹಿಂದಿನಂತೆಯೇ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಆರೋಗ್ಯ ಇನ್ನಿತರ ಎಲ್ಲಾ ಸೌಲಭ್ಯಗಳು ಅಂಚೆ ಇಲಾಖೆಯ ಮೂಲಕ ಬಡವರ್ಗವನ್ನು ತಲುಪುತ್ತಿದೆ ಎಂದರು.
ಶಾಮಿಯಾನ ಸಂಘದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್ ಕುಮಾರ್, ವಕೀಲ ಶರತ್ ಶೆಟ್ಟಿ, ಉದ್ಯಮಿ ಅಬುಲಾಲ್ ಪುತ್ತಿಗೆ, ಪುತ್ತೂರು ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್, ಸಿಸ್ಟಮ್ ಅಡ್ಮಿನ್ ನೂತನ್ ಬಂಗೇರ ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಸುಮಾರು 651 ಮಂದಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿಯ ಸದುಪಯೋಗವನ್ನು ಪಡೆದುಕೊಂಡರು. ಸುಮಾರು 245 ಮಂದಿ ಅಪಘಾತ ಮತ್ತು ಆರೋಗ್ಯ ವಿಮೆಯ ನೋಂದಣಿ ಮಾಡಿಸಿಕೊಂಡರು.
39 ಮಂದಿ ಅಂಚೆ ಇಲಾಖೆಯ ಸಣ್ಣ ಉಳಿತಾಯ ಖಾತೆಗಳು, 3 ಅಂಚೆ ಜೀವ ವಿಮೆ ( 28,00,000 S/A ಹಾಗೂ 39,225/- ಪ್ರೀಮಿಯಂ) ಸಂಗ್ರಹಿಸಲಾಯಿತು.

