ಕಾಮಿ೯ಕರ ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ: ಕಟ್ಟಡ ನಿಮಾ೯ಣ ಕಾಮಿ೯ಕರ ಆರೋಗ್ಯ ತಪಾಸಣೆ ಮತ್ತು ತರಬೇತಿ ಒದಗಿಸುವ ಯೋಜನೆ ಉದ್ಘಾಟನೆ

ಕಾಮಿ೯ಕರ ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ: ಕಟ್ಟಡ ನಿಮಾ೯ಣ ಕಾಮಿ೯ಕರ ಆರೋಗ್ಯ ತಪಾಸಣೆ ಮತ್ತು ತರಬೇತಿ ಒದಗಿಸುವ ಯೋಜನೆ ಉದ್ಘಾಟನೆ


ಮೂಡುಬಿದಿರೆ: ರಾಜ್ಯ ಕಾಮಿ೯ಕ ಇಲಾಖೆ ಮತ್ತು ಬ್ಲೋಸಂ ಆಸ್ಪತ್ರೆ ಬೆಂಗಳೂರು ಇವುಗಳ ವತಿಯಿಂದ ದ. ಕ ಜಿಲ್ಲೆಯ ನೊಂದಾಯಿತ ಕಟ್ಟಡ ಮತ್ತು ನಿಮಾ೯ಣ ಕಾಮಿ೯ಕರ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ಒದಗಿಸುವ ಯೋಜನೆಯ ಉದ್ಘಾಟನಾ ಸಮಾರಂಭ ಮತ್ತು ಆರೋಗ್ಯ ಶಿಬಿರವು ಮಂಗಳವಾರ ಸಮಾಜ ಮಂದಿರದಲ್ಲಿ ನಡೆಯಿತು. 


ಶಾಸಕ ಉಮಾನಾಥ ಎ. ಕೋಟ್ಯಾನ್ ಕಾಮಿ೯ಕ ಕಟ್ಟಡ ಮತ್ತು ನಿಮಾ೯ಣ ಕಾಮಿ೯ಕರ ಕಲ್ಯಾಣ ಮಂಡಳಿಯ ಸಂಚಾರಿ ಆರೋಗ್ಯ ಘಟಕಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ಮತ್ತು ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ  ಶರೀರದೊಳಗೆ ಯಾವ ತೊಂದರೆಗಳಿವೆ ಎಂಬುದು ಯಾರ ಗಮನಕ್ಕೂ ಬರುವುದಿಲ್ಲ ಅದಕ್ಕಾಗಿ ಕಾಮಿ೯ಕ ಇಲಾಖೆಯು ರೋಗಗಳನ್ನು ಪ್ರಥಮ ಹಂತದಲ್ಲಿಯೇ ಗುರುತಿಸುವ ನಿಟ್ಟಿನಲ್ಲಿ ಸಂಚಾರಿ ಆರೋಗ್ಯ ಘಟಕವನ್ನು ಆರಂಭಿಸುವ ಮೂಲಕ ಉತ್ತಮ ಕೆಲಸವನ್ನು ಕೈಗೊಂಡಿದೆ. 


ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಲು 3ರಿಂದ 5 ಸಾವಿರ ವೆಚ್ಚ ತಗಲುತ್ತದೆ ಆದರೆ ಸಂಚಾರಿ ಘಟಕವು ಕಾಮಿ೯ಕರ ಮನೆ ಬಾಗಿಲಿಗೆ ಬಂದು ತಪಾಸಣೆ ನಡೆಸಿ ಉಚಿತವಾಗಿ ಔಷಧಿ ನೀಡುತ್ತದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದ ಅವರು ಆಸ್ಪತ್ರೆ ದಾಖಲಾದರೆ ಅದರ ಬಿಲ್ಲನ್ನು ಕಾಮಿ೯ಕ ಇಲಾಖೆಯು ನಂತರ ಭರಿಸುತ್ತದೆ ಎಂದರು. 

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಟ್ಟಡ ಕಾಮಿ೯ಕರೆಂದರೆ ಕೇವಲ ಫ್ಲ್ಯಾಟ್ ನಿಮಾ೯ಣ ಮಾಡುವವರು ಮಾತ್ರ ಅಲ್ಲ ಮನೆ ನಿಮಿ೯ಸುವವರು ಕೂಡಾ ಕಟ್ಟಡ ಕಾಮಿ೯ಕರೇ. ಈ ಹಿಂದೆ ಆರೋಗ್ಯ ಮತ್ತು ಕಾಮಿ೯ಕ ಸಚಿವರಾಗಿದ್ದ ಆಸ್ಕರ್ ಫೆನಾ೯ಡಿಸ್ ಮತ್ತು ಮಲ್ಲಿಕಾಜು೯ನ ಖಗೆ೯ ಅವರು ಕಾಮಿ೯ಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸವಲತ್ತು ಸಿಗುವಂತೆ ಮಾಡಿದ್ದರು ಇದೀಗ ಸಂತೋಷ್ ಲಾಡ್ ಅವರು ಕಟ್ಟಡ ಕಾಮಿ೯ಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಸವಲತ್ತುಗಳಿಂದ ವಂಚಿತರಾದವರನ್ನು ಗುರುತಿಸಿ ಸಹಕಾರ ನೀಡುವಂತಹ ಕೆಲಸಗಳನ್ನು ಇಲಾಖೆ ಮಾಡಬೇಕಾಗಿದೆ ಎಂದರು.

ಬ್ಲಾಸಂ ಸಂಸ್ಥೆಯ ಯೋಜನಾ ಮುಖ್ಯಸ್ಥರಾದ ಪ್ರವೀಣ್,   ಮಂಗಳೂರು ವಿಭಾಗದ ಕಾರ್ಮಿಕ ಅಧಿಕಾರಿ ಕುಮಾರ್ .ಬಿ.ಆರ್. ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಯೋಜನೆಯ ಸಂಯೋಜಕ ಉಮೇಶ್ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article