ನ.26-ಡಿ.2 ರವರೆಗೆ ಮೂಡುಬಿದಿರೆ ವೆಂಕಟರಮಣ ದೇವಳದಲ್ಲಿ ಅಖಂಡ ಏಕಾಹ ಭಜನಾ ಅಮೃತ ಮಹೋತ್ಸವ
ಹನುಮಂತನಿಗೆ ಪ್ರಿಯವಾದ ಶ್ರೀ ಸುಂದರಕಾಂಡ ಹವನ ನ.27ಕ್ಕೆ ಬೆಳಿಗ್ಗೆ 8ಕ್ಕೆ, ನ.28 ಮತ್ತು ನ.29 ರಂದು ಬೆಳಿಗ್ಗೆ 7.30ಕ್ಕೆ ಪ್ರಾರಂಭವಾಗಲಿದ್ದು ನ.29ಕ್ಕೆ ಬೆಳಿಗ್ಗೆ 10.30ಕ್ಕೆ ಮಂಗಲೋತ್ಸವಗೊಳ್ಳಲಿದೆ ಎಂದರು.
ನ.27ಕ್ಕೆ ಮತ್ತು ನ.28ರಂದು ಸಂಜೆ ಗಂಟೆ 6ಕ್ಕೆ ವಿದ್ವಾನ್ ಅನಂತಕೃಷ್ಣ ಆಚಾರ್ಯರಿಂದ ಶ್ರೀ ಸುಂದರಕಾಂಡ ಹವನ ನಡೆಯಲಿದ್ದು ನ.29ಕ್ಕೆ ರಾತ್ರಿ 7.45ಕ್ಕೆ ಪ್ರವಚನದ ಮಂಗಲೋತ್ಸವ ನಡೆಯಲಿದೆ ಎಂದರು.
ಡಿ.1ಕ್ಕೆ ಪೂ.6ಕ್ಕೆ 75ನೇ ವರ್ಷದ ಅಖಂಡ ಏಕಾಹ ಭಜನಾ ಮಹೋತ್ಸವದ ದೀಪ ಪ್ರಜ್ವಲನೆ, ಬಳಿಕ ಆಹ್ವಾನಿತ ಭಜನಾ ಮಂಡಳಿಗಳಿಂದ ನಿರಂತರ 24 ತಾಸು ಭಜನಾ ಸೇವೆ ನಡೆಯಲಿದೆ. ಅದೇ ದಿನ ರಾತ್ರಿ ಗಂಟೆ 8ಕ್ಕೆ ವಿಶೇಷ ದೀಪಾಲಂಕಾರ ಜರುಗಲಿದೆ ಎಂದು ತಿಳಿಸಿದರು. ಡಿ.2ರಂದು ಬೆಳಿಗ್ಗೆ 6ಕ್ಕೆ ಅಖಂಡ ಏಕಾಹ ಭಜನಾ ಮಂಗಲೋತ್ಸವ ನಡೆಯಲಿದೆ ಎಂದು ಹೇಳಿದರು.
ವೆಂಕಟರಮಣ ಭಜನಾ ಮಂಡಳಿ ಅಧ್ಯಕ್ಷ ತುಕರಾಮ ಮಲ್ಯ ಮಾತನಾಡಿ ನಗರ ಭಜನೆಯ ಮೂಲಕ ಮಕ್ಕಳನ್ನು ಒಗ್ಗೂಡಿಸಲಾಗಿದೆ. ತಂಡವು ವಿವಿಧ ಕಡೆಗಳಲ್ಲಿ ಭಜನಾ ಸೇವೆಗಳನ್ನು ನೀಡುತ್ತಾ ಬಂದಿದೆ. ಅಖಂಡ ಏಕಾಹ ಭಜನಾ ಕಾಯ೯ಕ್ರಮದಲ್ಲಿ 30ಕ್ಕೂ ಅಧಿಕ ತಂಡಗಳು ಭಾಗವಹಿಸಲಿವೆ ಎಂದರು.
ದೇವಸ್ಥಾನದ ಟ್ರಸ್ಟಿಗಳಾದ ರಮಾನಾಥ್ ಭಟ್, ವಿಘ್ನೇಶ್ ಭಂಡಾರ್ಕರ್, ರಾಜೇಶ್ ಮಲ್ಯ, ಮನೋಜ್ ಶೆಣೈ, ರಘುವೀರ್ ಶೆಣೈ, ಅಶೋಕ್ ಮಲ್ಯ ಉಪಸ್ಥಿತರಿದ್ದರು.
