ಯುವ ವಕೀಲೆಯಿಂದ ಸರಕಾರಿ ಶಾಲೆಗೆ ಧ್ವನಿವಧ೯ಕ, ಸ್ಟೀಲ್ ಲೋಟ ಕೊಡುಗೆ: ಸನ್ಮಾನ
Monday, November 3, 2025
ಮೂಡುಬಿದಿರೆ: ತಾನು ಶಿಕ್ಷಣ ಪಡೆದ ಮೂಡುಮಾರ್ನಾಡಿನ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಗೆ ಯುವ ವಕೀಲೆ ರೂಪಾ ಬಲ್ಲಾಳ್ ಅವರು ಧ್ವನಿವರ್ಧಕ ವ್ಯವಸ್ಥೆ ಮತ್ತು 100 ಸ್ಟೀಲ್ ಲೋಟಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೂಪಾ ಬಲ್ಲಾಳ್ ಅವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಮುಖ್ಯ ಶಿಕ್ಷಕಿ ರಾಜಶ್ರೀ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶೋಧರ, ಹಾಗೂ ಪ್ರಮುಖರಾದ ರೋನಾಲ್ಡ್, ಸುಜಾತ, ಸುಮಿತ್ರಾ ಮತ್ತಿತರರು ಉಪಸ್ಥಿತರಿದ್ದರು.