ರಾಜ್ಯಮಟ್ಟದ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಸ್ಪಧೆ: ಯೆನೆಪೋಯ ಮಹಿಳೆಯರ ತಂಡ ದ್ವಿತೀಯ ಚಾಂಪಿಯನ್
Saturday, November 1, 2025
ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಬೆಂಗಳೂರುನಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ತೋಡಾರಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯವು ಮಹಿಳೆಯರ ವಿಭಾಗದಲ್ಲಿ 1 ಚಿನ್ನದ ಪದಕ, 1 ಬೆಳ್ಳಿಯ ಪದಕ ಹಾಗೂ 2 ಕಂಚಿನ ಪದಕವನ್ನು ಪಡೆದು ವೈ.ಐ.ಟಿಯ ಮಹಿಳೆಯರ ತಂಡ ದ್ವಿತೀಯ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ.
ಪುರುಷರ ವಿಭಾಗದಲ್ಲಿ 1 ಬೆಳ್ಳಿಯ ಪದಕ, ಹಾಗೂ 4 ಕಂಚಿನ ಪದಕ ಗೆದ್ದು ತೃತೀಯ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವೈ.ಐ.ಟಿ ಪ್ರಾಂಶುಪಾಲ ಡಾ. ಅಬ್ದುಲ್ ಕರೀಮ್, ಕ್ಯಾಂಪಸ್ ಆಡಳಿತಾಧಿಕಾರಿ ಬಿ. ಮಹಮ್ಮದ್ ಶಾಹಿದ್, ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರು ವಿಜೇತರನ್ನು ಅಭಿನಂದಿಸಿದರು.
ಯೆನೆಪೋಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ್ ವಿದ್ಯಾಥಿ೯ಗಳಿಗೆ ತರಬೇತಿ ನೀಡಿದ್ದರು.