ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ನ ಜಿಲ್ಲಾ ಸಂಘಟನಾ ಕಾಯ೯ದಶಿ೯ಯಾಗಿ ರವಿ. ಎಸ್. ಕೋಟ್ಯಾನ್ ಆಯ್ಕೆ

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ನ ಜಿಲ್ಲಾ ಸಂಘಟನಾ ಕಾಯ೯ದಶಿ೯ಯಾಗಿ ರವಿ. ಎಸ್. ಕೋಟ್ಯಾನ್ ಆಯ್ಕೆ


ಮೂಡುಬಿದಿರೆ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ 2025-27 ನೇ ಸಾಲಿನ ಜಿಲ್ಲಾ ನೂತನ ಸಂಘಟನಾ ಕಾರ್ಯದರ್ಶಿಯಾಗಿ ಮೂಡುಬಿದಿರೆಯ ರವಿ ಎಸ್. ಕೋಟ್ಯಾನ್ ಅವರು ಆಯ್ಕೆಯಾಗಿದ್ದಾರೆ.

ಹಲವು ವರ್ಷಗಳಿಂದ ಸಂಘಟನೆಯಲ್ಲಿ  ಸಕ್ರಿಯವಾಗಿರುವ ರವಿ ಎಸ್. ಕೋಟ್ಯಾನ್ ಅವರು, ಈ ಹಿಂದೆ ಎಸ್.ಕೆ.ಪಿ.ಎ. ಮೂಡುಬಿದಿರೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಾನಸ ಫೋಟೋಗ್ರಾಫಿ ಸ್ಟುಡಿಯೋ ಮಾಲಕರಾಗಿರುವ ರವಿ ಕೋಟ್ಯಾನ್ ಅವರ ಸೃಜನಶೀಲ ಛಾಯಾಗ್ರಹಣಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.ಅವರ ಅನುಭವ ಮತ್ತು ಸಂಘಟನಾ ಸಾಮರ್ಥ್ಯದಿಂದಾಗಿ ಅವರನ್ನು ಈ ಪ್ರಮುಖ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article